ಹುಬ್ಬಳ್ಳಿ: ಕಿಲ್ಲರ್ ಕೊರೋನಾ ಹಾವಳಿ ತಗ್ಗಿದ್ದರೂ ಕೂಡ ನೈಋತ್ಯ ರೈಲ್ವೆ ವಲಯದಲ್ಲಿ ಸಂಪೂರ್ಣ ರೈಲ್ವೆ ಕಾರ್ಯಾಚರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಸಂಪೂರ್ಣ ಕಾರ್ಯಾಚರಣೆ ಇಲ್ಲದೇ ಗ್ರಾಮೀಣ ಭಾಗದ ಪ್ರಯಾಣಿಕರು ಪರದಾಡುವಂತಾಗಿದೆ.
ಕೋವಿಡ್ ಹಿನ್ನಲೆಯಲ್ಲಿ ಲಾಕ್ ಡೌನ್ ಆಗಿದ್ದ ಸಂದರ್ಭದಲ್ಲಿ ಸಂಪೂರ್ಣ ಪ್ರಯಾಣಿಕರ ರೈಲುಗಳನ್ನು ಬಂದ್ ಮಾಡಲಾಗಿತ್ತು. ಕ್ರಮೇಣವಾಗಿ ಪಾಸಿಟಿವ್ ರೇಟ್ ಕಡಿಮೆಯಾದಂತೆ ರೈಲು ಸಂಚಾರ ಪ್ರಾರಂಭ ಮಾಡಲಾಗಿತ್ತು. ಆದರೆ ಲಾಕ್ ಡೌನ್ ಸಂದರ್ಭದಲ್ಲಿ ಬಂದ್ ಆಗಿದ್ದ ಬಸ್ ಸಂಚಾರ ಹಾಗೂ ವಿಮಾನ ಸಂಚಾರ ಯಥಾಸ್ಥಿತಿಗೆ ಬಂದಿದ್ದರೂ ಭಾರತೀಯ ರೈಲ್ವೆ ಮಾತ್ರ ಸ್ಪೆಷಲ್ ರೈಲು ಸಂಚಾರಕ್ಕೆ ನೀಡಿರುವ ಒತ್ತನ್ನು ಗ್ರಾಮೀಣ ಭಾಗದ ಪ್ಯಾಸೆಂಜರ್ ರೈಲಿಗೆ ನೀಡದೇ ಇರುವುದರಿಂದ ಅದೆಷ್ಟೋ ಜನರು ದಿನದ ಕೂಲಿಯನ್ನು ಕಳೆದುಕೊಂಡು ಮನೆಯಲ್ಲಿಯೇ ಇರುವಂತಾಗಿದೆ.
ಈಗಾಗಲೇ ಸುಮಾರು 80-90% ರೈಲ್ವೆ ಕಾರ್ಯಾಚರಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ. ಆದರೆ ಅವುಗಳು ಗ್ರಾಮೀಣ ಭಾಗದ ರೈಲು ನಿಲ್ದಾಣದಲ್ಲಿ ನಿಲುಗಡೆಗೊಳ್ಳುವುದಿಲ್ಲ. ಇದರಿಂದ ಗ್ರಾಮೀಣ ಭಾಗದ ಜನರು ಇಂತಹದೊಂದು ಸಮಸ್ಯೆ ಅನುಭವಿಸುವಂತಾಗಿದೆ. ಅಲ್ಲದೇ ಸಾಕಷ್ಟು ಕುಟುಂಬಗಳು ಕೋವಿಡ್ ಮುಗಿದರೂ ಚೇತರಿಕೆ ಕಾಣದೇ ಮನೆಯಲ್ಲಿಯೇ ಉಳಿಯುವಂತಾಗಿದೆ.
ಇನ್ನಾದರೂ ಭಾರತೀಯ ರೈಲ್ವೆ ಹಾಗೂ ನೈಋತ್ಯ ರೈಲ್ವೆ ವಲಯ ಈ ಬಗ್ಗೆ ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಿ ಸಾರ್ವಜನಿಕ ಪ್ರಯಾಣಕ್ಕೆ ಅನುಕೂಲವಾಗುವ ರೀತಿಯಲ್ಲಿ ಪ್ಯಾಸೆಂಜರ್ ಟ್ರೇನ್ ಆರಂಭ ಮಾಡಬೇಕಿದೆ.
ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
26/10/2021 12:40 pm