ಕುಂದಗೋಳ : ನಮಸ್ಕಾರಿ ಎಲ್ಲಾರಿಗೂ, ಈ ಕಾಂಪಿಟೇಶನ್ ಅನ್ನೋದ್ ಇರಲಾರ್ದ ಜಗಾನ ಇಲ್ಲಾ ನೋಡ್ರಿ, ಅದರಾಗೂ ಈ ಟ್ರೇನ್ ಬಸ್ಸು ಹತ್ತಾಕ್ ನಮ್ಮ ಮಂದಿ ಮಾಡೋ ಕಾಂಪಿಟೇಶನ್ ಒಲಿಂಪಿಕ್ಸ್ ಆಟಕ್ಕಿಂತ ಮಜಾ ಇರತೈತಿ.
ಹೌದರೀ ! ಮತ್ತ್ ಟ್ರೇನದಾಗ ಸೀಟ್ ಸಿಗಬೇಕಲ್ಲ ಅದಕ್ಕ ಕಾಂಪಿಟೇಶನ್. ಇಲ್ನೋಡ್ರಿ ನಮ್ಮ ಮಂದಿ ಮಕ್ಕಳು, ಕಾಕಾರು, ದೊಡ್ಡಪ್ಪಾರು, ಕಾಲೇಜು ಸ್ಟುಡೆಂಟ್ಸ್ ಅಷ್ಟ್ ಯಾಕ್ರೀ, ಈ ಅಜ್ಜಿ ನೋಡ್ರಿಲ್ಲೇ ರೈಲ್ವೆ ಟ್ರ್ಯಾಕ್ ಮ್ಯಾಲ್ ತಮ್ಮ ಜೀವದ್ದ ಕಬರ ಇರದಂಗ ಈ ಪಾಟಿ ಡಿಸ್ಕ್ಯಾಂವ್ ಡಿಸ್ಕ್ಯಾಂವ್ ಅಂತ್ ಜಿಕ್ಕೋತ್ ಹೊಂಟಾರ್.
ಅರೆ. ಇದು ಇವತ್ತಿನ ಕಥೆ ಅಲ್ಲಂತ್ ರೀ. ಬಾಳ್ ಹಳೇ ಕಥಿ ಅಂತ್, ಆದ್ರೇ ಈ ಮಂದಿಗೆ ತಿಳವಳಿಕಿ ಹೇಳ್ಯಾರು ಕೇಳಾರು ಯಾರು ಇಲ್ಲದಂಗ ಆಗೇತಿ. ಆ ಮ್ಯಾಲ್ ಈ ರೈಲ್ವೆ ಟ್ರ್ಯಾಕ್ ಮ್ಯಾಲ್ ಈ ಪುಣ್ಯಾತ್ಮರು ಪೋಟೋ ಶೂಟ್ ನಡೆಸ್ಯಾರ್ ನೋಡ್ರಿ.
ಮತ್ತ್ ಈ ರೈಲ್ವೆ ಟ್ರ್ಯಾಕ್ ದಾಟು ಮಂದಿಗೆ ಅಂತ್ಹೇಳಿ ಇಷ್ಟ್ ದೊಡ್ಡ ಫ್ಲೈ ಓವರ್ ಮಾಡಿಸಿದ್ದು ಬರೇ ತಿಳದಾರು ನಾಲ್ಕು ನಾಕ್ ಮಂದಿ ಹೋಗಾಕ ಉಪಯೋಗ ಮಾಡಿಕೊಂಡಾರ. ಆ ಮ್ಯಾಲ್ ಸ್ಟೇಶನ್'ದಾಗ ಒಂದ್ ರೈಲ್ವೆ ಟ್ರ್ಯಾಕ್ ಬ್ರೀಡ್ಜ್ ಕಾಮಗಾರಿ ಸಲುವಾಗಿ ಕ್ಲೋಸ್ ಮಾಡ್ಯಾರ್ ಅದ ಯಾವಾಗ ಕ್ಲೋಸ್ ಆಗೇತಿ ಇಲ್ಲಿ ಟ್ರ್ಯಾಕ್ ದಾಟಿ ಓಡಾರ ಸಂಖ್ಯೆ ಹೆಚ್ಚ್ ಆಗೇತಿ.
ನೋಡ್ರಿ ಜನರೇ ನಿಮ್ಮ ಜೀವಕ್ಕೆ ನೀವ್ ಹೊಣೆ ದಯವಿಟ್ಟು ಇಲ್ಲಿ ಬೋರ್ಡ್ ನೋಡ್ರಿ ಬ್ರಿಡ್ಜ್ ಮ್ಯಾಲ್ ಹತ್ತಿ ಹೋಗರಿ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
22/10/2021 10:14 am