ಕಲಘಟಗಿ: ಪಟ್ಟಣದಲ್ಲಿನ ಕಲಘಟಗಿ ತಾಲೂಕಾ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಪಿ ಎಲ್ ಡಿ) ಬ್ಯಾಂಕಿನ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ನೆಲ್ಲಿಹರವಿ ಗ್ರಾಮದ ಲಿಂಗರಾಜ ತಿರ್ಲಾಪುರ ಅವಿರೋಧವಾಗಿ ಆಯ್ಕೆಯಾದರು.
ನಿಜಗುಣಿ ಕೆಲಗೇರಿ ಅವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ
ಲಿಂಗರಾಜ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಜರುಗಿತು. ಚುನಾವಣಾಧಿಕಾರಿಯಾಗಿ ಸರೋಜಿನಿ ಹಂಚಿನಾಳ ಕಾರ್ಯನಿರ್ವಹಿಸಿದರು.
Kshetra Samachara
18/10/2021 08:00 pm