ಧಾರವಾಡ: ಪ್ಲಿಪ್ ಕಾರ್ಟ್ ಕಚೇರಿ ಕಾರ್ಯಾರಂಭ ಮಾಡಿದ ದಿನಗಳಿಂದ ಗ್ರಾಮದ ಕೆರೆಗೆ ಕೊಳಚೆ ನೀರು ಸೇರಿದಂತೆ ಮಲ-ಮೂತ್ರ ಸೇರುತ್ತಿದೆ, ಇದರಿಂದಾಗಿ ಕೆರೆಯ ನೀರು ಕಲುಷಿತಗೊಳ್ಳುತ್ತಿದೆ. ಮೊದಲೇ ಗ್ರಾಮಸ್ಥರು ಸಾಂಕ್ರಾಮಿಕ ರೋಗದ ಆತಂಕದಲ್ಲಿದ್ದಾರೆ ಹೀಗಿರುವಾಗ ಪ್ಲಿಪ್ ಕಾರ್ಟ್ ಕಂಪನಿಯ ನಿರ್ಲಕ್ಷ್ಯ ದಿಂದ ಜನರು ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಿಸಬೇಕಾದಿತು ಹಾಗಾಗಿ ಗ್ರಾಮದ ಕೆರೆಗೆ ಸೇರುತ್ತಿರುವ ಮಲಮೂತ್ರ ಹಾಗೂ ಕೊಳಚೆ ನೀರನ್ನು ಬೇರೆಡೆಗೆ ಕಳುಹಿಸುವ ವ್ಯವಸ್ಥೆಯನ್ನು ಕಂಪೆನಿ ಮಾಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ಕೊಟ್ಟಿದ್ದಾರೆ.
ಕೋಟೂರ ಗ್ರಾಮದ ಬಳಿ ಸ್ಥಾಪನೆ ಆಗಿರುವ ಪ್ಲಿಪ್ ಕಾರ್ಟ್ ಕಂಪನಿಯ ಕಚೇರಿಯ ಮುಂಭಾಗದಲ್ಲಿ, ಗ್ರಾಮ ಪಂಚಾಯತಿ ಸದಸ್ಯ ದಿಲಾವರ್ ನೇತೃತ್ವದಲ್ಲಿ ಪ್ಲಿಪ್ ಕಾರ್ಟ್ ಕಂಪನಿಯ ವಿರುದ್ಧ ಧಿಕ್ಕಾರ ಕೂಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದರು.
Kshetra Samachara
13/10/2021 06:45 pm