ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮತ್ತೊಂದು ಮಹತ್ವದ ನಿರ್ಧಾರದತ್ತ ಎಸ್.ಡಬ್ಲೂ. ಆರ್: 20 ನಿಲ್ದಾಣಗಳಿಗೆ ಸೌರಫಲಕ ಅಳವಡಿಕೆ

ಹುಬ್ಬಳ್ಳಿ: ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನೈಋತ್ಯ ರೈಲ್ವೆ ವಲಯವು ಈಗ ಮತ್ತೊಂದು ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ತನ್ನ ವ್ಯಾಪ್ತಿಯ ರೈಲು ನಿಲ್ದಾಣ ಹಾಗೂ ಇತರೆಡೆ ಸೌರಶಕ್ತಿಯನ್ನು ಬಳಸಿಕೊಳ್ಳುವುದಕ್ಕಾಗಿ ಮಹತ್ವದ ಹೆಜ್ಜೆ ಇಟ್ಟಿದೆ.

ರೈಲು ನಿಲ್ದಾಣ, ಸರ್ವಿಸ್ ಬಿಲ್ಡಿಂಗ್, ಎಲ್‌ಸಿ ಗೇಟ್ಸ್ ಸೇರಿ ಇತರೆಡೆ ಸೌರ ಫಲಕಗಳನ್ನು ಅಳವಡಿಸಲು ವಲಯದ ಅಧಿಕಾರಿಗಳು ಮುಂದಾಗಿದ್ದಾರೆ. ಇದರಿಂದ ರೈಲು ನಿಲ್ದಾಣ ಹಾಗೂ ಇತರ ಕಟ್ಟಡಗಳಿಗೆ ಅಗತ್ಯ ವಿದ್ಯುತ್ ದೊರೆಯುವ ಜೊತೆಗೆ ರೈಲ್ವೆ ಇಲಾಖೆಗೆ ಸಾಕಷ್ಟು ವೆಚ್ಚ ಕಡಿಮೆಯಾಗಲಿದೆ.

ವಲಯ ವ್ಯಾಪ್ತಿಯ ಹುಬ್ಬಳ್ಳಿ, ಕೆಎಸ್‌ಆರ್ ಬೆಂಗಳೂರು, ಮೈಸೂರು, ಯಶವಂತಪುರ, ಹೊಸಪೇಟೆ, ಗದಗ, ಬಳ್ಳಾರಿ ಸೇರಿ 108 ನಿಲ್ದಾಣಗಳ ಮೇಲ್ಯಾವಣಿಗಳಿಗೆ ಹಾಗೂ 7 ಸರ್ವಿಸ್ ಬಿಲ್ಡಿಂಗ್‌ಗಳಿಗೆ (ರೈಲ್ ಸೌಧ, ಹುಬ್ಬಳ್ಳಿ, ಬೆಂಗಳೂರು ಹಾಗೂ ಮೈಸೂರಿನ ವಿಭಾಗೀಯ ವ್ಯವಸ್ಥಾಪಕರ ಕಚೇರಿ, ಹುಬ್ಬಳ್ಳಿಯ ರೈಲ್ವೆ ಆಸ್ಪತ್ರೆ) ಸೌರ ಫಲಕಗಳನ್ನು ಅಳವಡಿಸಲಾಗಿದೆ.

2020-21ನೇ ಸಾಲಿನಲ್ಲಿ ರೈಲ್ ಸೌಧದಲ್ಲಿ 100 ಕೆಡಬ್ಲ್ಯೂಪಿ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಇದರಿಂದ 1.008 ಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆಯಾಗಲಿದ್ದು, 9.07 ಲಕ್ಷ ರೂ. ಉಳಿತಾಯವಾಗಲಿದೆ. ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕರ ಕಚೇರಿಯಲ್ಲಿ 320 ಕೆಡಬ್ಲ್ಯೂಪಿ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಇದರಿಂದ 3.42 ಲಕ್ಷ ಯುನಿಟ್ ಉತ್ಪಾದನೆಯಾಗಲಿದ್ದು, 11.37 ಲಕ್ಷ ರೂ. ಪ್ರತಿ ವರ್ಷ ಉಳಿತಾಯವಾಗಲಿದೆ. ನೈಋತ್ಯ ರೈಲ್ವೆ ವಲಯವು 2021-22ನೇ ಸಾಲಿನಲ್ಲಿ 20 ರೈಲು ನಿಲ್ದಾಣಗಳಲ್ಲಿ ಸೌರ ಫಲಕಗಳನ್ನು ಅಳವಡಿಸುವ ಯೋಜನೆ ರೂಪಿಸಿದೆ. ಕೇಂದ್ರ ಸರ್ಕಾರದ ಯೋಜನೆಯಂತೆ 2030ನೇ ವರ್ಷದ ಒಳಗೆ 'ಶೂನ್ಯ ವಾಯು ಮಾಲಿನ್ಯ'ದ ಉದ್ದೇಶವನ್ನು ಸಾಧಿಸಲು ಬದ್ಧರಾಗಿದ್ದೇವೆ ಎಂದು ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ತಿಳಿಸಿದ್ದಾರೆ.

Edited By : Shivu K
Kshetra Samachara

Kshetra Samachara

09/10/2021 03:52 pm

Cinque Terre

19.48 K

Cinque Terre

0

ಸಂಬಂಧಿತ ಸುದ್ದಿ