ಕುಂದಗೋಳ : ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಶಿರೂರು ಸಂಶಿ ಬ್ರಿಡ್ಜ್ ಕಾಮಗಾರಿಯನ್ನು ಶೀಘ್ರವೇ ಮುಕ್ತಾಯ ಮಾಡಿಕೊಡಬೇಕೆಂದು ಕುಸುಮಾವತಿ ಶಿವಳ್ಳಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಕುಂದಗೋಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿವಿಧ ಅಧಿಕಾರಿಗಳ ಸಭೆ ಕರೆದು ಮಾತನಾಡಿದ ಅವರು ಕ್ಷೇತ್ರದಲ್ಲಿ ದಿನ ನಿತ್ಯ ಸಾವಿರಾರು ಕಾರ್ಮಿಕರಿಗೆ, ಹಿರಿಯ ನಾಗರೀಕರಿಗೆ, ಗರ್ಭಿಣಿ ಬಾಣಂತಿಯರು ಸೇರಿದಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳು ನಿತ್ಯ ಪ್ರಯಾಣಕ್ಕೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಈ ವಿಷಯ ಮಾಧ್ಯಮದಲ್ಲೂ ಪದೇ ಪದೇ ಪ್ರಸಾವಾಗುತ್ತಲೇ ಇದೆ ಕೂಡಲೇ ಸಂಶಿ ಶಿರೂರ್ ಬ್ರಿಡ್ಜ್ ನಿರ್ಮಾಣ ಮಾಡಬೇಕೆಂದರು.
ಅಲ್ಲದೇ ಈಗಾಗಲೇ ಹಲವಾರು ಬಾರಿ ಅಧಿಕಾರಿಗಳಿಗೆ ಜನರ ಸಮಸ್ಯೆ ಗಮನಕ್ಕೆ ತಂದರು ಕಾಮಗಾರಿಯ ಏಕೆ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳಿಗೆ ತರಾಟೆಯನ್ನು ತೆಗೆದುಕೊಂಡು ಮುಂದಿನ ದಿನಗಳಲ್ಲಿ ಬ್ರಿಡ್ಜ್ ಕಾಮಗಾರಿ ತುರ್ತಾಗಿ ಮುಗಿಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಸಂಶಿ ಗ್ರಾಮದ ಮುಖಂಡ ಎ. ಬಿ.ಉಪ್ಪಿನ. ಗ್ರಾಮೀಣ ಸಾರಿಗೆ ನಿರ್ದೇಶಕ ರಾಮನಗೌಡ್ರ. ಸಾರಿಗೆ ಇಂಜಿನಿಯರ್ ಚವಡ್ಡನವರ, ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಪಿ.ಆರ್.ಕಿತ್ತೂರು ಸೇರಿದಂತೆ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
09/10/2021 12:27 pm