ಕುಂದಗೋಳ : ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಶಿರೂರು ಬ್ರಿಡ್ಜ್ ಬಿದ್ದ ಪರಿಣಾಮ ಪ್ರಯಾಣಿಕರು, ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಸ್ಥರು, ರೈತರಷ್ಟೇ ಅಲ್ಲಾ ಈ ಬೀದಿ ಬದಿ ಅಂಗಡಿ ವ್ಯಾಪಾರಿಗಳು ಸಹ ಕಷ್ಟಕ್ಕೆ ಈಡಾಗಿ ಬ್ರಿಡ್ಜ್ ದುರಸ್ತಿ ಮಾಡಿಸುವಂತೆ ಕೈ ಮುಗಿಯುತ್ತಿದ್ದಾರೆ.
ಇತ್ತ ಗುಡೇನಕಟ್ಟಿ ಮಾರ್ಗವಾಗಿ ರೈಲ್ವೆ ಬ್ರಿಡ್ಜ್ ಕಾಮಗಾರಿ ಪ್ರಗತಿಯಲ್ಲಿದೆ ಈ ಕಡೆ ಸಂಶಿ ಮಾರ್ಗವಾಗಿ ಶಿರೂರು ಬ್ರಿಡ್ಜ್ ದುರಸ್ತಿ ಹಂತದಲ್ಲಿದ್ದು ಕುಂದಗೋಳ ತಾಲೂಕಿನ 57 ಹಳ್ಳಿಗಳಲ್ಲಿ ಬರೋಬ್ಬರಿ 35 ಹಳ್ಳಿಗಳು ಸಮರ್ಪಕ ಸಾರಿಗೆ ವ್ಯವಸ್ಥೆ ಇರದೆ ಕುಂದಗೋಳ ಪಟ್ಟಣದ ವ್ಯಾಪಾರದ ಸಂಪರ್ಕ ಕಳೆದುಕೊಂಡಿವೆ.
ಈ ಕಾರಣ ಕುಂದಗೋಳ ಪಟ್ಟಣದ ಗಾಳಿ ಮರೆಮ್ಮದೇವಿ ದೇವಸ್ಥಾನದಿಂದ ಹಿಡಿದು ಮಾರ್ಕೇಟ್ ಕೊನೆವರೆಗಿನ ಅಂಗಡಿಕಾರರು ಮಹಾನವಮಿ, ವಿಜಯದಶಮಿ, ದೀಪಾವಳಿಯಂತಹ ಹಬ್ಬದ ಆರಂಭದಲ್ಲೇ ಗ್ರಾಹಕರಿಲ್ಲದೇ ಕೂರುವ ಪರಿಸ್ಥಿತಿ ನಿರ್ಮಾಣವಾಗಿ ಮಾರ್ಕೇಟ್ ಬೀದಿ ಕೊರೊನಾ ಸೆಮಿ ಲಾಕ್ ಡೌನ್ ಮಾಡಿದಂತಾಗಿದೆ.
ಇನ್ನೂ ಕೆಲ ವ್ಯಾಪಾರಿಗಳು ವಹಿವಾಟು ಇಲ್ಲದೆ ಅಂಗಡಿ ಕ್ಲೋಸ್ ಮಾಡಿ ಕೂತಿದ್ದರೇ, ಕೆಲವರು ಅಂಗಡಿ ಬಾಡಿಗೆ ಕಟ್ಟಲಾರದ ಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಮಾನ್ಯ ಕೇಂದ್ರ ಸಚಿವರು ಜಿಲ್ಲಾಧಿಕಾರಿಗಳು ಗಮನಿಸಬೇಕಿದೆ.
ಶ್ರೀಧರ ಪೂಜಾರ,
ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
07/10/2021 05:59 pm