ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಾಲಿಕೆ ವಲಯ ಕಚೇರಿಯ ಅವ್ಯವಸ್ಥೆ: ಆಯುಕ್ತರೇ ನೋಡಿ ಇಲ್ಲಿನ ಸಮಸ್ಯೆ.‌.!

ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಲಯ ಕಚೇರಿಯಲ್ಲಿ ಅವ್ಯವಸ್ಥೆ ಹೇಳ ತೀರದಾಗಿದೆ. ವಲಯ ಕಚೇರಿಯಲ್ಲಿ ಏನಾದರೂ ಅರ್ಜಂಟ್ ಕೆಲಸ ಇಟ್ಟುಕೊಂಡು ಬಂದರೇ ಇಲ್ಲಿ ಅಲೆದು ಅಲೆದು ಆಸ್ಪತ್ರೆಗೆ ಅಡ್ಮಿಟ್ ಆಗೋದು ಗ್ಯಾರಂಟಿ.

ಸಾರ್ವಜನಿಕರ ಜನನ ಹಾಗೂ ಮರಣ ಪ್ರಮಾಣ ಪತ್ರ ಪಡೆಯಲು ಹರಸಾಹಸ ಪಡುವಂತಾಗಿದೆ. ವ್ಯಕ್ತಿಯೊಬ್ಬರು ತಮ್ಮ ಪಾಲಕರ ಮರಣ ಪ್ರಮಾಣ ಪತ್ರ ಪಡೆಯಲು ಅಲೆದು ಅಲೆದು ಸುಸ್ತಾಗಿ ಕಣ್ಣೀರು ಹಾಕುತ್ತ ಪ್ರಾಣ ಕಳೆದುಕೊಳ್ಳುವ ಮಟ್ಟಿಗೆ ಮಾತನಾಡುತ್ತಿದ್ದಾರೆ‌. ಅಧಿಕಾರಿಗಳೇ, ಪಾಲಿಕೆ ಆಯುಕ್ತರೇ ನೋಡಿ ಇವರ ಕಣ್ಣೀರು...

ಹುಬ್ಬಳ್ಳಿ ಗೋಕುಲ ರಸ್ತೆಯ ಅಕ್ಷಯ ಪಾರ್ಕ್ ನಲ್ಲಿರುವ ಪಾಲಿಕೆಯ ವಲಯ ಕಚೇರಿಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಮಾಧ್ಯಮಕ್ಕೆ ನೀಡಿದ್ದಾರೆ.

ವೃದ್ಧರು,‌ಮಹಿಳೆಯರು ಯಾರೇ ಪಾಲಿಕೆ ವಲಯ ಕಚೇರಿಗೆ ಆಗಮಿಸಿದರು ಇಲ್ಲಿನ ಸಮಸ್ಯೆ ಅನುಭವಿಸಿಯೇ ಹೋಗಬೇಕಾಗಿದೆ.

Edited By : Shivu K
Kshetra Samachara

Kshetra Samachara

29/09/2021 03:30 pm

Cinque Terre

111.28 K

Cinque Terre

34

ಸಂಬಂಧಿತ ಸುದ್ದಿ