ಕುಂದಗೋಳ : ತಮ್ಮ ಮನೆಯ ಪಕ್ಕ ತಮ್ಮದೆ ಸ್ವಂತ ಜಾಗದಲ್ಲಿ ಇರುವ ಹೆಸ್ಕಾಂ ಇಲಾಖೆಯ ವಿದ್ಯುತ್ ಪ್ರವಾಹಕ (ಟಿಸಿ)ಯನ್ನು ಬೇರೆಡೆ ಸ್ಥಳಾಂತರ ಮಾಡುವಂತೆ ಇಲ್ಲೊಬ್ರು ಸ್ಥಳೀಯ ಗ್ರಾಮ ಪಂಚಾಯಿತಿ, ತಹಶೀಲ್ದಾರ ಕಚೇರಿ, ಹೆಸ್ಕಾಂ ಇಲಾಖೆ ಸೇರಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರಿಗೂ ಮನವಿ ಮಾಡಿದ್ರೂ ಈ ಬಗ್ಗೆ ಸೂಕ್ತ ಕ್ರಮ ಇರಲಿ ಅಲ್ಲಿ ವಿದ್ಯುತ್ ಪ್ರವಾಹಕ ಇರುವ ಕಾರಣ ಏನು ಸಮಸ್ಯೆ ಉಂಟಾಗಿದೆ ಎಂಬುದನ್ನು ಯಾರು ವಿಚಾರಸದೇ ಇರುವುದು ಚಿಂತೆಗೀಡು ಮಾಡಿದೆ.
ಹೌದು ! ಕುಂದಗೋಳ ತಾಲೂಕಿನ ಬೆಟದೂರು ಗ್ರಾಮದ ಸಯ್ಯದ್ ಅಹಮ್ಮದ್ ದುರ್ಗಾ ಎಂಬುವವರೇ ಕಳೆದ ಹಲವಾರು ವರ್ಷಗಳಿಂದ ಟಿಸಿ ಸ್ಥಳಾಂತರದ ಮನವಿ ಪತ್ರ ಹಿಡಿದು ಇಲಾಖೆ ಇಲಾಖೆ ಜನಪ್ರತಿನಿಧಿಗಳ ಮನೆ ಬಾಗಿಲಿಗೆ ಸುತ್ತಾಡಿ ಬೇಸತ್ತು ಕೊನೆಗೆ ಪಬ್ಲಿಕ್ ನೆಕ್ಸ್ಟ್ ಮಾಧ್ಯಮದ ಮೂಲಕ ಅಧಿಕಾರಿ ಮತ್ತು ಜನಪ್ರತಿನಿಧಿಗಳಿಗೆ ವಿಷಯ ತಲುಪಿಸಿದ್ರೂ.
ಒಟ್ಟಾರೆ ಟಿಸಿ ಅಕ್ಕ ಪಕ್ಕ ಓಡಾಡುವ ಮನುಷ್ಯ ಜಾನುವಾರು ಸೇರಿದಂತೆ ಟಿಸಿ ಹಿಂದಿರುವ ಅಂಗನವಾಡಿ ಮಕ್ಕಳಿಗೆ ಯಾವ ರೀತಿ ತೊಂದರೆ ಇದೆ ಎಂಬುದನ್ನು ಗಮನಿಸಿ ಅಗತ್ಯ ಬಿದ್ದಲ್ಲಿ ಹೆಸ್ಕಾಂ ಇಲಾಖೆ ಅಧಿಕಾರಿಗಳು ಟಿಸಿ ಸ್ಥಳಾಂತರ ಮಾಡುವ ಚಿಂತನೆ ಮಾಡಬೇಕಿದೆ.
Kshetra Samachara
28/09/2021 03:36 pm