ವರದಿ: ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ...!
ಹುಬ್ಬಳ್ಳಿ: ಅದು ಸಾರ್ವಜನಿಕರಿಗೆ ಸಾರಿಗೆ ಸೇವೆಯನ್ನು ಕಲ್ಪಿಸುವ ಇಲಾಖೆ. ಆದರೆ ಈ ಇಲಾಖೆಯ ಆಧಾಯಕ್ಕೆ ಮಾತ್ರ ಕತ್ತಲೇ ಆವರಿಸಿದೆ. ಕೋವಿಡ್ ಪ್ರಕರಣಗಳು ತಗ್ಗಿದ್ದರೂ ಜಾರಿಯಲ್ಲಿರುವ ನೈಟ್ ಕರ್ಫ್ಯೂ ನಿರ್ಧಾರದಿಂದ ಈ ಇಲಾಖೆ ಸಂಕಷ್ಟ ಅನುಭವಿಸುವಂತಾಗಿದೆ. ಸರ್ಕಾರಿ ಸ್ವಾಮ್ಯದ ಇಲಾಖೆಯೇ ಸರ್ಕಾರದ ನಿರ್ಧಾರದಿಂದ ಸಮಸ್ಯೆ ಸುಳಿಗೆ ಸಿಲುಕಿದೆ.
ಹೌದು.. ಸಾರ್ವಜನಿಕರಿಗೆ ಸಾರಿಗೆ ಸೇವೆಯನ್ನು ಒದಗಿಸುವ ಸಾರಿಗೆ ಇಲಾಖೆಯು ಲಾಕ್ ಡೌನ್ ಸಂದರ್ಭದಲ್ಲಿ ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಅನ್ ಲಾಕ್ ಬಳಿಕ ಚೇತರಿಸಿಕೊಳ್ಳುವ ನಿರೀಕ್ಷೆ ಇಟ್ಟು ಕೊಂಡಿದ್ದ ಸಾರಿಗೆ ಸಂಸ್ಥೆ ನೈಟ್ ಕರ್ಫ್ಯೂ ನಿರ್ಧಾರದಿಂದ ಚೇತರಿಕೆಗೊಳ್ಳದೇ ಆರ್ಥಿಕ ಸಂಕಷ್ಟ ಅನುಭವಿಸುತ್ತಿದೆ.
ಈಗಾಗಲೇ ಧಾರವಾಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದರೂ ಕೂಡ ರಾಜ್ಯ ಸರ್ಕಾರದ ನೈಟ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ರಾತ್ರಿ ಸಮಯದಲ್ಲಿ ಪ್ರಯಾಣಿಕರು ಪ್ರಯಾಣಿಸಲು ಕೂಡ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ.
ಲಾಕ್ ಡೌನ್ ಪೂರ್ವದಲ್ಲಿ ಸಾಕಷ್ಟು ಪ್ರಮಾಣದಲ್ಲಿದ್ದ ಆದಾಯ ಈಗ ಕುಸಿದಿತ್ತು. ಆದರೆ ನೈಟ್ ಕರ್ಫ್ಯೂ ಜಾರಿ ಇರುವುದರಿಂದ ಮತ್ತಷ್ಟು ಹೊಡೆತ ಬಿದ್ದಂತಾಗಿದೆ.
ಒಟ್ಟಿನಲ್ಲಿ ಹೊಟೇಲ್, ಕೈಗಾರಿಕೋದ್ಯಮಕ್ಕೆ ಮಾತ್ರವಲ್ಲದೆ ನೈಟ್ ಕರ್ಫ್ಯೂ ಸರ್ಕಾರಿ ಸ್ವಾಮ್ಯದ ಇಲಾಖೆಗೂ ಸಂಕಷ್ಟ ತಂದೊಡ್ಡಿದ್ದು, ಕೋವಿಡ್ ಪ್ರಕರಣ ತಗ್ಗಿರುವ ಸಂದರ್ಭದಲ್ಲಿ ಕೂಡ ನೈಟ್ ಕರ್ಫ್ಯೂ ಜಾರಿಯಲ್ಲಿರುವುದು ಗಾಯದ ಮೇಲೆ ಬರೆ ಏಳೆದಂತಾಗಿದೆ.
Kshetra Samachara
21/09/2021 07:54 pm