ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ ಸಂತ್ಯಾಗ ಮನಸ್ಸಿಗೆ ಬಂದ್ಹಂಗ ಬೀದಿ ಬದಿ ವ್ಯಾಪಾರಕ್ಕ ದರ ನಿಗದಿ

ಕಲಘಟಗಿ : ನಮಸ್ಕಾರಿ ರೀ ಕಲಘಟಗಿಯ ಮಹಾ ಜನತೆ ಏನ್ರೀ ನಿಮ್ಮೂರು ಕಲಘಟಗಿ ಪಟ್ಟಣದ ಒಳಗೆ ಮಂಗಳವಾರಕ್ಕೊಮ್ಮೆ ನಡೆಯೋ ವಾರದ ಸಂತಿ ಒಳಗ ಬೀದಿ ಬದಿ ವ್ಯಾಪಾರಸ್ಥರಿಗೆ ಆಸನಕ್ಕೆ ತಾಲಾಗೊಂದೊಂದು ದರ ನಿಗದಿ ಮಾಡ್ಯಾರ ಗೊತ್ತೇನ್ರಿ.

ಗೊತ್ತಿಲ್ಲಾ ಅಂದ್ರ ನಾವ್ ಹೇಳ್ತೇವಿ ಕೇಳ್ರಿ, ಈ ಕಲಘಟಗಿ ಪಟ್ಟಣ ಪಂಚಾಯಿತಿ ಬೀದಿ ಬದಿ ವ್ಯಾಪಾರಸ್ಥರ ಟೆಂಡರ್ ಇನ್ನೂ ಆಗಿಲ್ಲಂತ, ಹಳೇ ಟೆಂಡರವರ ಮುಂದುವರೆಸಿ ಮುಂದೂನೂ ಅವ್ರು ಟೆಂಡರ್ ತಗೋಬೇಕು ಅನ್ನು ವಿಚಾರದಾಗ ಅದಾರಂತ ಅದಕ್ಕ ಕಲಘಟಗಿ ಪಟ್ಟಣದಾಗ ಸಂತಿ ಹಚ್ಚೋ ರೈತರಿಗೆ ಮನಸ್ಸಿಗೆ ಬಂದ್ಹಂಗ ರೊಕ್ಕಾ ವಸೂಲಿ ಮಾಡಕತ್ತಾರ ಇದರ ಬಗ್ಗೆ ಅಲ್ಲಿನ ವ್ಯಾಪಾರಸ್ಥರ ಪಬ್ಲಿಕ್ ನೆಕ್ಸ್ಟ್'ಗೆ ಏನ್ ಹೇಳ್ಯಾರ ಕೇಳ್ರಿ.

ಈ ಬಗ್ಗೆ ನಾವು ಸಂಬಂಧಪಟ್ಟ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಭೇಟಿ ಆಗಿ ಕೇಳಿದ್ರ ಅವ್ರು ನಾವ್ ಹೋದ ಮ್ಯಾಲೆ ಮಾಸ್ಕ್ ಹಾಕ್ಕೊಂಡು ಸಂತಿ ಹಚ್ಚೋರಿಗೆ ಕೇವಲ ಹತ್ತ ರೂಪಾಯಿ ಅಷ್ಟೇ ಬೀದಿ ಬದಿ ವ್ಯಾಪಾರಸ್ಥರಿಗೆ ದರ ಐತಿ, ಅಂವಾ ಟೆಂಡರ ತಗೋಂಡಾವ್ ವ್ಯಾಪಾರ ಮಾಡೋ ಅಳತೆ ಮ್ಯಾಲ್ ರೊಕ್ಕಾ ಕೇಳ್ತಾನ್ ಅಂದ್ರು, ಅದ್ ಯಾವ ಅಳತೆಗೆ ಎಷ್ಟು ರೊಕ್ಕಾ ಅನ್ನೋದು ಸ್ವತಃ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಗೊತ್ತಿಲ್ಲಾ ಅವ್ರ ಕಡೆ ಆ ಮಾಹಿತಿನೂ ಇಲ್ಲಾ.

ಒಟ್ಟಾರೆ ರೈತರು ವ್ಯಾಪಾರಸ್ಥರು ಮೂವತ್ತು, ಐವತ್ತು, ನೂರು ಇಲ್ಲದ್ಹಂಗ ಒಮ್ಮಿನು ಸಂತಿ ಹಚ್ಚಾಕ ಕಡಿಮಿ ರೊಕ್ಕಾ ಕೊಟ್ಟಿಲ್ಲಂತ ನೋಡ್ರಿ ಇಷ್ಟ ರೊಕ್ಕಾ ತಗೋಂಡು ವ್ಯಾಪಾರಸ್ಥರಿಗೆ ರಶೀದಿ ಕೊಟ್ಟಾರೇನ್ರಿ ಅದು ಇಲ್ಲಾ. ಮಾನ್ಯ ಜಿಲ್ಲಾಧಿಕಾರಿಗಳೇ ಹಾಗೂ ಮಾನ್ಯ ಶಾಸಕ ಸಿ.ಎಂ.ನಿಂಬಣ್ಣನವರೇ ನೀವೋಮ್ಮೆ ಸಂತಿಗೆ ಹೋಗ್ರಿ ಅಲ್ಲೇ ನಿಮ್ಮ ಜನಸಂಪರ್ಕ ಮುಂದ ಸಂತಿ ಐತಿ ರೈತರು ವ್ಯಾಪಾರಸ್ಥರ ಕಷ್ಟ ಬಗೆಹರಿಸ್ರೀ.

Edited By : Manjunath H D
Kshetra Samachara

Kshetra Samachara

09/09/2021 05:30 pm

Cinque Terre

109.45 K

Cinque Terre

3

ಸಂಬಂಧಿತ ಸುದ್ದಿ