ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕಳಪೆ ರಸ್ತೆ ನಿರ್ಮಾಣ, ಜಿಪಂ ಅಧಿಕಾರಿಗಳಿಗೆ ಹಳ್ಳಿಗರಿಂದ ಹೋಯ್ತು ಪತ್ರ !

ಕುಂದಗೋಳ : ತಾಲೂಕಿನ ಗುರುವಿನಹಳ್ಳಿಯಲ್ಲಿ ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾದ ರಸ್ತೆಯೊಂದು ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳಪೆ ಕಾಮಗಾರಿಯಾಗಿದ್ದು ರಸ್ತೆ ಪುನರ್ ನಿರ್ಮಾಣಕ್ಕೆ ಜನ ಒತ್ತಾಯಿಸಿ ಜಿಪಂ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಹೌದು ! ಗುರುವಿನಹಳ್ಳಿ ಕಬ್ಬನಿ ಹಳ್ಳದಿಂದ ನಿರ್ಮಾಣವಾದ ಕೋಟಿ ರೂಪಾಯಿ ರಸ್ತೆ ನಿರ್ಮಾಣವಾದ ಕೆಲವೇ ವಾರಗಳಲ್ಲಿ ಸಂಪೂರ್ಣ ಕಳಪೆ ಕಾಮಗಾರಿಗೆ ಬಲಿಯಾಗಿ ರಸ್ತೆ ತುಂಬಾ ಡಾಂಬರ್ ಹರಳು ಎದ್ದಿದ್ದು, ಟ್ರ್ಯಾಕ್ಟರ್ ಓಡಾಡಿದ ರಭಸಕ್ಕೆ ಕೆಲವೆಡೆ ರಸ್ತೆಯ ಡಾಂಬರ್ ಕಿತ್ತೆ ಹೋಗಿದೆ. ಈ ಬಗ್ಗೆ ಗುರುವಿನಹಳ್ಳಿ ನಾಗರೀಕರೊಬ್ಬರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳೇ ಪತ್ರ ಬರೆದು ರಸ್ತೆ ಪರಿಶೀಲನೆ ನಡೆಸಿ ಸೂಕ್ತ ಕಾಮಗಾರಿ ಕೈಗೊಳ್ಳಲು ಒತ್ತಾಯಿಸಿದ್ದಾರೆ ಅದರಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮರಳಿ ರಸ್ತೆ ಪರಿಶೀಲನೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಕಾಮಗಾರಿ ಗುಣಮಟ್ಟದಲ್ಲಿ ಆಗುವವರೆಗೂ ಗ್ರಾಮಸ್ಥರು ಈ ಪತ್ರ ಚಳುವಳಿ ಬಿಡುವುದಿಲ್ಲಾ ಎಂದಿದ್ದು, ಒಟ್ಟಾರೆ ಹಳ್ಳಿಗಳೂ ತಮ್ಮ ಮೂಲ ಸೌಕರ್ಯ ಪಡೆದುಕೊಳ್ಳಲು ಪತ್ರ ಚಳುವಳಿ ಕೈಗೊಂಡಿರುವುದು ಪ್ರಶಂಸನೀಯ.

Edited By : Nagesh Gaonkar
Kshetra Samachara

Kshetra Samachara

05/08/2021 10:39 pm

Cinque Terre

63.08 K

Cinque Terre

9

ಸಂಬಂಧಿತ ಸುದ್ದಿ