ಧಾರವಾಡ: ಶಿವ.. ಶಿವಾ.. ಇಲ್ನೋಡ್ರಪ್ಪಾ.. ಎಲ್ಲೋ ಕೆಸರಿನ ಗದ್ದೆ ಓಟಕ್ಕೆ ಗದ್ದೆ ರೆಡಿ ಮಾಡಿದ್ದಾರೇನೋ ಅನ್ಕೊಂಡ್ರಾ? ಅಲ್ರಿ ಯಪ್ಪಾ ಇದು ಧಾರವಾಡ ತಾಲೂಕಿನ ಮುಗದ ಗ್ರಾಮದಿಂದ ಅಳ್ನಾವರ, ಹಳಿಯಾಳ ಹಾಗೂ ರಾಮನಗರಕ್ಕೆ ಸಂಪರ್ಕ ಕಲ್ಪಿಸೋ ಮುಖ್ಯ ರಸ್ತೆ.
ಇದರ ಆಕಾರ ನೋಡಿದ್ರ ಇದೇನ ರಸ್ತೆನೋ ಅಥವಾ ಕೆಸರಿನ ಗದ್ದೆನೋ ಅನ್ನುವಂಗ ಆಗೇತಿ. ಕಲಘಟಗಿ ಮತಕ್ಷೇತ್ರ ವ್ಯಾಪ್ತಿಗೆ ಈ ಮುಗದ ಗ್ರಾಮ ಬರತೈತಿ. ಈ ರಸ್ತೆ ಅಳ್ನಾವರ ಪಟ್ಟಣಕ್ಕೆ ಸಂಪರ್ಕ ಕಲ್ಪಿಸೋ ಮುಖ್ಯ ರಸ್ತೆ. ಈಗ ಇದು ಸಂಪರ್ಕ ಕಲ್ಪಿಸೋ ರಸ್ತೆ ಅಲ್ಲ ಧಿಕ್ಕು ತಪ್ಪಿಸೋ ರಸ್ತೆ ಆದಂಗ ಆಗೈತಿ.
ಈ ಹಿಂದೆ 15 ಲಕ್ಷ ರೂಪಾಯಿ ಖರ್ಚು ಮಾಡಿ ಈ ರಸ್ತೆ ರಿಪೇರಿ ಮಾಡಿದ್ರಂತ. ಹೆಂಗ ರಿಪೇರಿ ಮಾಡ್ಯಾರ ಅನ್ನೋದನ್ನ ನೀವ್ ನೋಡ್ರಿ. ಇದರಾಗ ಹೆಂಗ ಹೋಗಬೇಕ್ ಅನ್ನುದನ ತಿಳಿಯೋದಿಲ್ಲ. ಒಟ್ಟ ಹೆಂಗಾರ ರಸ್ತೆ ಮಾಡಿ ಜನರ ಕಣ್ಣಾಗ ಮಣ್ಣ ಒಗದ ಹೋಗಿಬಿಡ್ತಾರ. ಈ ರಸ್ತೆ ಅಧಿಕಾರಿಗಳು ಮತ್ತ ಗುತ್ತಿಗೆದಾರರು ಕೂಡಿ 15 ಲಕ್ಷ ರೂಪಾಯಿದಾಗ ರಿಪೇರಿ ಮಾಡಿಸಿದ್ರಂತ ಆದ್ರ ಅದರಾಗ ಎಷ್ಟ ರೊಕ್ಕ ಖರ್ಚು ಆಗೇತ್ಯೋ ಏನೋ ದೇವರ ಬಲ್ಲ.
ಈ ರಸ್ತೆದ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಮತ್ತೊಮ್ಮೆ ಸಂಪೂರ್ಣ ವರದಿ ಬಿಚ್ಚಿಡೋ ಕೆಲಸ ಮಾಡತೈತಿ.
Kshetra Samachara
05/08/2021 11:24 am