ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ದಂಡಾಧಿಕಾರಿಗಳ ಕಾರ್ಯಲಯವೇ ಹೀಗಾದ್ರೆ ಹೇಗೆ ಸ್ವಾಮಿ

ನವಲಗುಂದ : ಇದು ಯಾವುದೋ ಊರಾಚೆ ಇರೋ ಕಟ್ಟಡದ ಆವರಣ ಅಲ್ರಿ, ಇದು ನಮ್ಮ ನವಲಗುಂದ ಪಟ್ಟಣದ ಮಿನಿವಿಧಾನ ಸೌಧದ ತಾಲೂಕಾ ದಂಡಾಧಿಕಾರಿಗಳ ಕಾರ್ಯಲಯದ ಆವರಣದಲ್ಲಿನ ದೃಶ್ಯಗಳು ಇವು...

ಅಧಿಕಾರಿಗಳು ಯಾಕಿಷ್ಟು ನಿರ್ಲಕ್ಷ ಮಾಡ್ತಾರೆ ಅನ್ನೋದೇ ಅರ್ಥವಾಗ್ತಿಲ್ಲಾ ನೋಡ್ರಿ, ಇದು ಪಟ್ಟಣದ ಮಿನಿವಿಧಾನ ಸೌಧದ ಆವರಣದಲ್ಲಿ ಕಂಡು ಬಂದ ದೃಶ್ಯಗಳು ಇವು. ಕಾಪೌಂಡ್ ಪಕ್ಕದಲ್ಲಿ ಉಗಮವಾದ ಕಸದ ತಿಪ್ಪೆ, ಆ ತಿಪ್ಪೆಯಲ್ಲಿ ಕುಡಿದು ಬಿಸಾಡಿದ ಮದ್ಯದ ಬಾಟಲಿಗಳು, ಇನ್ನು ಆವರಣದಲ್ಲೇ ಮೂತ್ರ ಮಾಡುತ್ತಿರುವ ಸಾರ್ವಜನಿಕರು. ಅವನ್ನೆಲ್ಲಾ ನೋಡಿದ್ರೆ ಕಾರ್ಯಾಲಯದ ಆವರಣದ ನಿರ್ವಹಣೆ ತಿಳಿದೇ ಬಿಡುತ್ತೆ, ಈ ಬಗ್ಗೆ ಕೂಡಲೇ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿ, ಕಸ ವಿಲೇವಾರಿಯ ನಿರ್ವಣೆ ಸರಿಯಾಗಿ ಮಾಡಲು ಮತ್ತು ಇಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ಸಾರ್ವಜನಿಕರಿಗೆ ದಂಡ ವಿಧಿಸುವ ಮೂಲಕ ಸ್ವಚ್ಛತೆಗೆ ಮುಂದಾಗಬೇಕಿದೆ.

Edited By : Manjunath H D
Kshetra Samachara

Kshetra Samachara

02/08/2021 02:17 pm

Cinque Terre

35.91 K

Cinque Terre

1

ಸಂಬಂಧಿತ ಸುದ್ದಿ