ನವಲಗುಂದ : ತಾಲೂಕಿನ ಯಮನೂರ ಗ್ರಾಮದ ಬಳಿಯಿಂದ ಪಡೆಸೂರ ಗ್ರಾಮ ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ದುರಾವಸ್ಥೆ ಇದು, ಮಳೆಗಾಲದಲ್ಲಿ ಜನರು ಸಂಚಾರ ನಡೆಸಲು ಪರದಾಟ ನಡೆಸುವಂತಹ ಪರಿಸ್ಥಿತಿ ಬಂದೋದಗಿದೆ...
ಪಡೆಸೂರ, ಶಾನವಾಡ, ಹಾಳಕುಸಗಲ್ ಗ್ರಾಮಗಳಿಗೆ ತೆರಳುವ ಜನರು ಪ್ರತಿ ಬಾರಿ ಮಳೆಯಾದಾಗೂ ಸಂಚಾರಕ್ಕೆ ಇದೆ ರೀತಿ ಪರದಾಟ ನಡೆಸುವಂತಹ ಅನಿವಾರ್ಯತೆಗೆ ಸಿಲುಕಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಯಾವೊಬ್ಬ ಅಧಿಕಾರಿಗಳು ಸಹ ಗಮನ ಹರಿಸದೆ ಜನರ ಸಂಕಷ್ಟಕ್ಕೆ ಕಾರಣವಾಗಿದ್ದಾರೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕಿದೆ.
Kshetra Samachara
30/07/2021 11:41 am