ಹುಬ್ಬಳ್ಳಿ- ಸುನಿಧಿ ಕಲಾ ಸೌರಭ ವತಿಯಿಂದ ಫೆ.19 ರಂದು ಮುಂಜಾನೆ 11ಕ್ಕೆ ತಾಲ್ಲೂಕಿನ ಸುತಗಟ್ಟಿ ಗ್ರಾಮದ, ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾವ್ಯ ಚಿಗುರು ವಿದ್ಯಾರ್ಥಿಗಳಿಗಾಗಿ ಕವನ ರಚನಾ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಶ್ರೀ ಸಿದ್ಧಾರೂಡ ಸ್ವಾಮಿ ಮಠದ ಟ್ರಸ್ಟ್ ಕಮಿಟಿ ಚೇರ್ಮನ್ ರಾದ ದೇವೇಂದ್ರಪ್ಪ ಮಾಳಗಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆ
ಧಾರವಾಡದ ರಂಗಾಯಣ ಮಾಜಿ ನಿರ್ದೇಶಕ ಸುಭಾಸ ನರೇಂದ್ರ, ಅತಿಥಿಯಾಗಿ ಲಕ್ಷ್ಮಣರಾವ್ ಓಕ್,ಎಸ್ ಡಿಎಂಸಿ ಅಧ್ಯಕ್ಷ ಸಿದ್ದಪ್ಪ ಕುಂಬಾರ, ಸ.ಪ್ರಾ. ಸುತಗಟ್ಟಿ ಮುಖ್ಯೋಪಾಧ್ಯಾಯ ಎಮ್. ಬಿ. ತಹಶೀಲ್ದಾರ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Kshetra Samachara
17/02/2021 06:31 pm