ಹುಬ್ಬಳ್ಳಿ: ಅಯ್ಯೋ ಇದೇನೂ ರಸ್ತೆಯೋ ಅಥವಾ ಹಳ್ಳವೋ ಎಂದು ಗೊಣಗುಡುತ್ತಾ' ಸಂಚರಿಸುತ್ತಿರುವ ವಾಹನ ಸವಾರರು, ಇಂತಹ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ವಾರ್ಡ್ ನಂಬರ 38 ಶಕ್ತಿ ಕಾಲೋನಿಯಲ್ಲಿ. ಇಲ್ಲಿ ಸುಮಾರು 3 ರಿಂದ 4 ವರ್ಷ ಕಳೆದರೂ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದೇ, ಇಲ್ಲಿನ ನಿವಾಸಿಗಳು ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇಲ್ಲಿನ ಜನ ಸರಿಯಾದ ಗಾಳಿಯನ್ನು ಸಹ ತೆಗೆದುಕೊಳ್ಳಲು ಆಗುತ್ತಿಲ್ಲ. ಗಾಳಿ ಬೆಳಕಿಗೆ ಮನೆಯ ಕಿಡಕಿ ತೆಗೆದರೆ ಧೂಳು ನುಗ್ಗಿ ಮನೆಯ ತುಂಬೆಲ್ಲ ಬರಿ ಧೂಳು ಧೂಳು. ಅಷ್ಟೇ ಅಲ್ಲದೆ ಹಾವು, ಚೋಳು, ಹಂದಿ ಮನೆಯಲ್ಲಿಯೇ ಬರುತ್ತಿವೆ. ಇಲ್ಲಿ ಯಾವುದೇ ರೀತಿಯ ಮೂಲ ಸೌಲಭ್ಯಗಳು ಸಿಗುತ್ತಿಲ್ಲ, ಆದಷ್ಟು ಬೇಗ ಇಲ್ಲಿನ ಸಮಸ್ಯೆಗಳನ್ನು ಬಗೆ ಹರಿಸದೇ ಇದ್ದರೆ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು, ಇಲ್ಲಿನ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಇಂತಹ ಉದ್ವಿಗ್ನ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿರುವ ಹುಬ್ಬಳ್ಳಿ ಜನತೆಗೆ ಉತ್ತಮ ರಸ್ತೆ ಯಾವಾಗ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
Kshetra Samachara
16/02/2021 09:57 pm