ಹುಬ್ಬಳ್ಳಿ: ಅದು ವಾಣಿಜ್ಯನಗರಿ ಹುಬ್ಬಳ್ಳಿಯ ಮಹತ್ವಪೂರ್ಣ ಯೋಜನೆಯಲ್ಲಿ ಒಂದಾಗಿರುವ ಕಾಮಗಾರಿ.ಈ ಕಾಮಗಾರಿಯಿಂದ ವಾಣಿಜ್ಯನಗರಿ ಹುಬ್ಬಳ್ಳಿಯ ವಿನ್ಯಾಸವೇ ಸಂಪೂರ್ಣ ಬದಲಾಗಲಿದೆ.ವಾಣಿಜ್ಯನಗರಿ ಖ್ಯಾತಿಗೆ ಕಿರೀಟ್ ಇಟ್ಟಂತೆ ಈ ಯೋಜನೆ ತಲೆ ಎತ್ತಲಿದ್ದು,ಈ ಕಾಮಗಾರಿಗೆ ಈಗಾಗಲೇ ಚಾಲನೆ ಕೂಡ ಸಿಕ್ಕಿದೆ.ಅಲ್ಲದೇ ಕಾಮಗಾರಿ ಪ್ರಾಥಮಿಕ ಹಂತದ ಕೆಲಸ ಕೂಡ ಪ್ರಾರಂಭವಾಗಿದೆ.ಅಷ್ಟಕ್ಕೂ ಯಾವುದು ಆ ಕಾಮಗಾರಿ ಅಂತೀರಾ ಈ ಸ್ಟೋರಿ ನೋಡಿ....
ಹುಬ್ಬಳ್ಳಿಯ ಹೃದಯ ಭಾಗವಾಗಿರುವ ಚೆನ್ನಮ್ಮ ವೃತ್ತದಲ್ಲಿ ನಿರ್ಮಾಣವಾಗುತ್ತಿರುವ ಪ್ಲೈ ಓವರ್ ಕಾಮಗಾರಿಗೆ ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರ್ ವರ್ಚುವಲ್ ಮೂಲಕ ಚಾಲನೆ ನೀಡಿದ್ದಾರೆ.ಅಲ್ಲದೇ ಈಗಾಗಲೇ ಮಣ್ಣಿನ ಪರೀಕ್ಷೆ ಕೂಡ ನಡೆಯುತ್ತಿದ್ದು,ಹುಬ್ಬಳ್ಳಿ ಲ್ಯಾಮಿಂಗ್ಟನ್ ರಸ್ತೆಯಲ್ಲಿ ಅಂದ್ರೇ ಉಪನಗರ ಪೊಲೀಸ್ ಠಾಣೆ ಹಾಗೂ ಮಹಾನಗರ ಪಾಲಿಕೆ ಹತ್ತಿರದ ರಸ್ತೆಯಲ್ಲಿ ನಿರ್ಮಾಣ ಕಾರ್ಯದ ಹಿನ್ನೆಲೆಯಲ್ಲಿ ಮಣ್ಣಿನ ಪರೀಕ್ಷೆ ನಡೆಯುತ್ತಿದೆ.ಉತ್ತರ ಕರ್ನಾಟಕದ ಮೊದಲ ಪ್ಲೈ ಓವರ್ ಎಂಬ ಖ್ಯಾತಿ ಪಡೆದಿರುವ ಹುಬ್ಬಳ್ಳಿ ಪ್ಲೈ ಓವರ್ ವಿನ್ಯಾಸವನ್ನು ಈ ಮಣ್ಣು ಪರೀಕ್ಷೆ ನಿರ್ಧರಿಸಲಿದೆಯಂತೆ.
322 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಪ್ಲೈ ಓವರ್ ನಿರ್ಮಾಣ ಕಾರ್ಯವನ್ನು ಹರಿಯಾಣ ಮೂಲದ ಜಾಂಡು ಎಂಬುವಂತ ಕನಸ್ಟ್ರಕ್ಷನ್ ಕಂಪನಿಗೆ ನೀಡಿದ್ದು, ಮಣ್ಣು ಪರೀಕ್ಷೆಯೇ ಎರಡು ತಿಂಗಳಾಗಲಿದೆಯಂತೇ.
ಪ್ಲೈಓವರ್ ನಿರ್ಮಾಣಕ್ಕೆ ಭೂಮಿಯ ಎಷ್ಟು ಅಡಿ ಆಳದಲ್ಲಿ ಪಿಲ್ಲರ್ ನಿರ್ಮಾಣ ಮಾಡಬೇಕು ಹಾಗೂ ಎಷ್ಟು ಅಡಿಯಲ್ಲಿ ಪಿಲ್ಲರ್ ನಿರ್ಮಾಣ ಮಾಡಿದರೇ ಸೂಕ್ತ ಎಂಬುವಂತದ್ದನ್ನು ಈ ಮಣ್ಣಿನ ಪರೀಕ್ಷೆ ನಿರ್ಧರಿಸಲಿದೆ.ಇನ್ನೂ ಸಂಗ್ರಹಿಸಿದ ಮಣ್ಣನ್ನು ದೆಹಲಿಯಲ್ಲಿರುವ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದ ನಂತರದಲ್ಲಿ ಮುಂದಿನ ಕಾಮಗಾರಿ ಬಲಗೊಳ್ಳಲು ಸಾಧ್ಯವಿದೆ.
ಈಗಾಗಲೇ ಹತ್ತು ದಿನದಿಂದ ಮಣ್ಣಿನ ಪರೀಕ್ಷೆ ಕಾರ್ಯ ನಡೆಯುತ್ತಿದೆ.ಪಿಲ್ಲರ್ ಸ್ಥಾಪನೆ ಮಾಡುವ ಸುಮಾರು ಹದಿನೈದು ಮಿಟರ್ ವ್ಯಾಪ್ತಿಯಲ್ಲಿ ಮಣ್ಣಿನ ಪರೀಕ್ಷೆ ಮಾಡಿ ನಿರ್ಮಾಣ ಮಾಡಲು ನಿರ್ಧರಿಸಲಾಗುತ್ತದೆ.
ಈಗಾಗಲೇ ಮಣ್ಣಿನ ಪರೀಕ್ಷೆ ಕಾರ್ಯ ಚುರುಕಾಗಿ ನಡೆದಿದ್ದು,ಹುಬ್ಬಳ್ಳಿಯಲ್ಲಿ ಸುಮಾರು 70 ಪಿಲ್ಲರ್ ಗಳು, ಗದಗ ರಸ್ತೆ, ಬೆಂಗಳೂರು ರಸ್ತೆ,ಗೋಕುಲ ರಸ್ತೆ ಸೇರಿದಂತೆ ವಾಣಿಜ್ಯನಗರಿ ಬಹುತೇಕ ಕಡೆಗಳಲ್ಲಿ ಪಿಲ್ಲರ್ ತಲೆ ಎತ್ತಲಿವೆ.ಒಟ್ಟಿನಲ್ಲಿ ಪ್ಲೈಓವರ್ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು,ಇನ್ನೂ ಕೆಲವೇ ವರ್ಷಗಳಲ್ಲಿ ಪ್ಲೈಓವರ್ ತಲೆ ಎತ್ತಲಿದೆ.
Kshetra Samachara
29/01/2021 11:22 am