ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕಾನೂನು ಪಾಲನೆ ಸಮಾಜ ಸ್ವಾಸ್ಥ್ಯ ಕಾಪಾಡಲು ಯುವಕರಿಗೆ ಕರೆ

ಕುಂದಗೋಳ : ನೆಹರು ಯುವ ಕೇಂದ್ರ ಧಾರವಾಡ ಆದರ್ಶ ಯುವಕ ಮಂಡಳ ಹೀರೆಹರಕುಣಿ ವಿನಾಯಕ ಯುವಕ ಸಂಘ ಸಂಶಿ ಇವರುಗಳ ಸಹಯೋಗದಲ್ಲಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಇವರುಗಳ ಸಂಯುಕ್ತ ಆಶ್ರಯದಲ್ಲಿ ನೆಹರು ಯುವ ಕೇಂದ್ರ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜು ನಾಯ್ಕರ ಪ್ರಾಸ್ತಾವಿಕವಾಗಿ ಮಾತನಾಡಿ ಯುವಕರಲ್ಲಿ ಒಗ್ಗಟ್ಟಿದ್ದರೇ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಜಗತ್ತು ಉನ್ನತ ಮಟ್ಟಕ್ಕೆ ತಲುಪಿಸಬಹುದು ಎಂದರು. ಗ್ರಾಮೀಣ ಪೊಲೀಸ್ ಠಾಣೆಯ ಎ.ಎಸ್.ಐ ಮಲ್ಲಿಕಾರ್ಜುನ ಜಕ್ಕಲಿ ಮಾತನಾಡಿ ಯುವಕರು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕು, ಸರ್ಕಾರಿ ಸಂವಿಧಾನ ಜಾರಿಗೆ ತಂದಿರುವ ಕಾನೂನುಗಳನ್ನು ಸರಿಯಾಗಿ ಪಾಲಿಸಬೇಕು ಎಂದರು.

ಮಂಜುನಾಥ ಎಂಟ್ರೂವಿ ಮಾತನಾಡಿ ಸಮಾಜದಲ್ಲಿ ಯುವಕರ ಪಾತ್ರ ಬಹಳ ಮಹತ್ವ ಪಡೆದಿದೆ, ಯುವಕರು ಆಧುನಿಕ ಯುಗದಲ್ಲಿ ತಮಗಾಗಿ ಲಭ್ಯವಿರುವ ಸೌಲಭ್ಯ ಸರಿಯಾಗಿ ಬಳಸಿಕೊಳ್ಳಬೇಕು ಎಂದರು. ಕೃಷ್ಣಪ್ಪ ಲಮಾಣಿ ಸ್ವಾಗತಿಸಿದರು, ಆರೀಪ್ ಹೊಳಲು ವಂದಿಸಿದರು, ಸುರೇಶ ಧರಣಿ ಮತ್ತು ಕಾಲೇಜು ಸಿಬ್ಬಂದಿ ಮತ್ತು ನೆಹರು ಯುವ ಕೇಂದ್ರ ರಾಷ್ಟ್ರೀಯ ಯುವ ಕಾರ್ಯಕರ್ತರು ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳು ಹಾಜರಿದ್ದರು.

Edited By : Nirmala Aralikatti
Kshetra Samachara

Kshetra Samachara

21/01/2021 09:58 am

Cinque Terre

25.42 K

Cinque Terre

0

ಸಂಬಂಧಿತ ಸುದ್ದಿ