ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಆರೋಗ್ಯ ಸಮತೋಲನಕ್ಕೆ ನಿಶ್ಚಿಂತೆಯೆ ಪರಿಹಾರದ ಮಾರ್ಗ

ಕುಂದಗೋಳ : ತಾಲೂಕಿನ ವಿಜ್ಞಾನ ಹಾಗೂ ಸಮಾಜಶಾಸ್ತ್ರದ ಶಿಕ್ಷಕರಿಗೆ ಮಾನಸಿಕ ಆರೋಗ್ಯದ ಕುರಿತಾಗಿ ಕುಂದಗೋಳ ತಾಲೂಕ ಆಸ್ಪತ್ರೆಯಲ್ಲಿ ತರಬೇತಿ ಕಾರ್ಯಗಾರ ಬುಧವಾರ ಯಶಸ್ವಿಯಾಗಿ ನೆರವೇರಿತು.

ಧಾರಾವಾಡದ ಮಾನಸಿಕ ಆಸ್ಪತ್ರೆಯ ವೈದ್ಯಾಧಿಕಾರಿ ವೈಶಾಲಿ ಹೆಗಡೆ ಸಮಾಜಶಾಸ್ತ್ರದ ಶಿಕ್ಷಕರಿಗೆ ತರಬೇತಿ ನೀಡಿ ಮಾನಸಿಕ ಅಸ್ವಸ್ಥತೆಗೆ ನಿಶ್ಚಿಂತೆಯಿಂದ ಇರುವುದೆ ಪರಿಹಾರ, ಕ್ಷಣ ಮಾತ್ರದಲ್ಲಿ ಮನಸ್ಸಿನ್ನು ದಾರಿ ತಪ್ಪಿಸಬಲ್ಲ ಘಟನೆ ಹಾಗೂ ನೆನಪುಗಳನ್ನು ಗಂಭೀರವಾಗಿ ಪರಿಗಣಿಸದಿರಿ ಎಂದರು.

ತಾಲೂಕ ಆರೋಗ್ಯ ಅಧಿಕಾರಿಗಳಾದ ಡಾಕ್ಟರ್ ಭಾಗೀರತಿ ಮೆಡ್ಲೇರಿ ಅವರು ಕಾರ್ಯಕ್ರಮ ಉದ್ಘಾಟಿಸಿದರೆ ಬಿ.ಆರ್.ಸಿ ಕೋ ಆರ್ಡಿನೇಟರ್ ಶಿವಾಜಿ ರೋಡೆ ಅವರು ಮುಖ್ಯ ಅತಿಥಿಗಳಾಗಿ ಮಾನಸಿಕ ಆರೋಗ್ಯ ಸ್ಥಿಮಿತವಾಗಿ ಇಟ್ಟುಕೊಳ್ಳಲು ಅನುಸರಿಸಬೇಕಾದ ಕ್ರಮ ಹಾಗೂ ಮನಸ್ಸನ್ನು ದಾರಿ ತಪ್ಪಿಸುವ ಆಲೋಚನೆಗಳಿಂದ ಮುಕ್ತವಾಗುವ ಮಾರ್ಗಗಳನ್ನು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ರೂಪಾ ತುರಮರಿ ಕಾರ್ಯಕ್ರಮ ನಿರೂಪಿಸಿ ಶಿಕ್ಷಕರನ್ನು ವಂದಿಸಿದರು.

Edited By : Nirmala Aralikatti
Kshetra Samachara

Kshetra Samachara

21/01/2021 09:17 am

Cinque Terre

17.03 K

Cinque Terre

1

ಸಂಬಂಧಿತ ಸುದ್ದಿ