ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : ಭದ್ರಾಪೂರದಲ್ಲಿ ರಕ್ಷಣೆ ಕಾಣದ ಯೋಧನ ಸಮಾಧಿ. ಸಮಾಧಿ ಮೇಲೆ ಸರಾಯಿ ಪ್ಯಾಕೆಟ್

ಅಣ್ಣಿಗೇರಿ : ನಮ್ಮ ದೇಶದಲ್ಲಿ ಯೋಧರಿಗೆ ಅಪಾರ ಗೌರವ.ಬೆಲೆ ಕೊಡುವುದು ರೂಢಿ. ಅವರ ಸೇವೆ ಸಮಾಜಕ್ಕೆ ಪ್ರಶ್ನಾತೀತ.ಪ್ರತಿಯೊಬ್ಬ ಸೈನಿಕನಿಗೂ ಗೌರವ ಸಲ್ಲಿಸುವುದು ಪ್ರತಿ ನಾಗರಿಕನ ಕರ್ತವ್ಯ.ಆದರೆ ತಾಲೂಕಿನ ಭದ್ರಾಪೂರ ಗ್ರಾಮದ ಯೋಧ ಲಕ್ಷ್ಮಣ ಪಡೇಸೂರ ನಿಧನರಾಗಿ 5 ವರ್ಷ ಸಮೀಪಿಸಿದರೂ ಸರ್ಕಾರ ಅವರ ಸಮಾಧಿಗೆ ಸೂಕ್ತ ರಕ್ಷಣೆ ಒದಗಿಸದೇ ಅವಗೌರವ ತೋರುತ್ತಿರುವ ಆರೋಪ ತಾಲೂಕಿನ ತುಂಬೆಲ್ಲ ಕೇಳಿ ಬರುತ್ತಿದೆ.

ಯೋಧನ ಸಮಾಧಿಯನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಗ್ರಾಮದ ಯುವಕ ಮಂಡಳವೊಂದರ ಜಾಗೆಯ ಗಟಾರ ದಂಡೆಯ ಮೇಲೆ ಸಮಾಧಿ ನಿರ್ಮಿಸಿ ಕೈತೊಳೆದುಕೊಂಡಿತ್ತು. ಹುತಾತ್ಮ ಯೋಧನ ಸಮಾಧಿಯ ಮೇಲೆ ಪ್ರತಿದಿನ ಮೂಕ ಪ್ರಾಣಿಗಳು ಮಲಮೂತ್ರ ಮಾಡುತ್ತಿವೆ.ಸಮಾಧಿ ಮೇಲೆ ಮಧ್ಯದ ಪ್ಯಾಕೆಟ್‌ಗಳು ಅಷ್ಟೇ ಅಲ್ಲದೇ ಗುಟ್ಕಾ ಚೀಟಗಳನ್ನು ಎಸೆಯುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳು ಸಂಪೂರ್ಣ ಮೌನವಹಿಸಿ ನಿರ್ಲಕ್ಷ್ಯವಹಿಸಿದ್ದಾರೆ ಎಂಬ ಕೂಗು ಗ್ರಾಮದಲ್ಲಿ ಕೇಳಿ ಬರುತ್ತಿದೆ. ಇನ್ನಾದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಎಚ್ಛೆತ್ತು ಹುತಾತ್ಮ ಯೋಧನ ಸಮಾಧಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಸ್ಥಳೀಯರು ಪಬ್ಲಿಕ್ ನೆಕ್ಸ್ಟ್ ಮೂಲಕ ಮನವಿ ಮಾಡಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

17/01/2021 09:28 pm

Cinque Terre

62.51 K

Cinque Terre

3

ಸಂಬಂಧಿತ ಸುದ್ದಿ