ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಬಳಕೆಯಾಗದೇ ಉಳಿದ ನೀರಿನ ಟ್ಯಾಂಕರ್ ಗಳು

ತಬಕದಹೊನ್ನಳ್ಳಿ: ಸುಮಾರು ಒಂದು ವರ್ಷದಿಂದ ಬಳಕೆಯಾಗದೇ ಉಳಿದ ನೀರಿನ ಟ್ಯಾಂಕರ್ ಗಳನ್ನ ಬಳಕೆ ಮಾಡಬೇಕೆಂದು ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಹತ್ತಾರು ನೀರಿನ ಟ್ಯಾಂಕರ್ ಗಳು ಇದ್ದು, ಒಂದೊಂದಕ್ಕೂ ಸುಮಾರು ಒಂದು ಲಕ್ಷ ಹಣ ಖರ್ಚು ಮಾಡಲಾಗಿದೆ. ನೀರಿಗಾಗಿ ಹಾಹಾಕಾರ ಉಂಟಾಗಿದೆ. ಹಾಗಾಗಿ ನೀರಿನ ಟ್ಯಾಂಕರ್ ಗಳಿಗೆ ನೀರು ತುಂಬಿಸಬೇಕು. ಹಾಗೂ ಜನರ ನೀರಿನ ದಾಹವನ್ನ ನೀಗಿಸಬೇಕೆಂದು ಜನರು ಆಗ್ರಹಪಡಿಸಿದರು.

ಗ್ರಾಮದ ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟೇ ಬಾರಿ ಮನವರಿಕೆ ಮಾಡಿಕೊಟ್ಟರೂ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ ಅಂತ ಸಾರ್ವಜನಿಕರು ಹಿಡಿ ಶಾಪ ಹಾಕಿದರು.

Edited By : Manjunath H D
Kshetra Samachara

Kshetra Samachara

14/01/2021 02:48 pm

Cinque Terre

62.55 K

Cinque Terre

1

ಸಂಬಂಧಿತ ಸುದ್ದಿ