ಧಾರವಾಡ: ರಾಜ್ಯ ಸರ್ಕಾರ ಈಗಾಗಲೇ ಶಾಲಾ, ಕಾಲೇಜುಗಳನ್ನು ಪುನರಾರಂಭಿಸಿದ್ದು, ವಿದ್ಯಾರ್ಥಿಗಳು ಬಸ್ ಪಾಸ್ ಕೂಡ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳು ಬಸ್ ಪಾಸ್ ಪಡೆದುಕೊಳ್ಳಲು ಪರದಾಡುವಂತಾಗಿದೆ.
ಹೌದು! ಇದಕ್ಕೆ ಮುಖ್ಯ ಕಾರಣ ಕಾಲೇಜಿನ ಸಿಬ್ಬಂದಿ. ವಿದ್ಯಾರ್ಥಿಗಳಿಗೆ ಬಸ್ ಪಾಸ್ ಗಾಗಿ ಅಗತ್ಯ ದಾಖಲೆಗಳನ್ನು ಪೂರೈಸಬೇಕಾದ ಸಿಬ್ಬಂದಿಗೆ ಸಮಯ ಪ್ರಜ್ಞೆ ಇರದೇ ಇರುವುದರಿಂದ ವಿದ್ಯಾರ್ಥಿಗಳು ಅಗತ್ಯ ದಾಖಲೆ ಪಡೆದುಕೊಳ್ಳಲು ಪರದಾಡುತ್ತಿದ್ದಾರೆ. ಇದರಿಂದ ಅವರು ಬಸ್ ಪಾಸ್ ಪಡೆಯಲು ಕೂಡ ಪರದಾಡುವಂತಾಗಿದೆ.
ವಿದ್ಯಾರ್ಥಿಗಳು ತಮ್ಮ ಕಾಲೇಜಿನಲ್ಲಿ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಲು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದರೂ ಅವುಗಳನ್ನು ಪೂರೈಕೆ ಮಾಡಬೇಕಾದ ಸಿಬ್ಬಂದಿ ಸ್ಥಳದಲ್ಲಿ ಇರುವುದೇ ಇಲ್ಲ. ಬುಧವಾರ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅಗತ್ಯ ದಾಖಲೆ ಪಡೆದುಕೊಳ್ಳಲು ಕಾಲೇಜಿಗೆ ಬಂದಿದ್ದರು ಆದರೆ, 11.30 ಆದರೂ ಅವುಗಳನ್ನು ಪೂರೈಕೆ ಮಾಡಬೇಕಾದ ಸಿಬ್ಬಂದಿ ಬರದೇ ಇದ್ದದ್ದರಿಂದ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಯಿತು.
Kshetra Samachara
13/01/2021 02:14 pm