ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪ್ರತಿಷ್ಠಿತ ಸಿದ್ಧಾರೂಡ ಮಠದಲ್ಲಿ ಶೌಚಾಲಯಗಳು ಅವ್ಯವಸ್ಥೆ ಆಗರ

ಹುಬ್ಬಳ್ಳಿ: ಅದು ಉತ್ತರ ಕರ್ನಾಟಕದಲ್ಲಿ ಮಾತ್ರವಲ್ಲದೆ ರಾಜ್ಯದಲ್ಲಿಯೇ ಪ್ರತಿಷ್ಠಿತ ಮಠ.ಈ ಮಠದ ಆರಾಧ್ಯ ದೈವ ದೇಶಕ್ಕೆ ಆಧಾರ ಎಂಬುವಂತ ಮಾತಿದೆ.ಆದ್ರೇ ಈ ಮಠದಲ್ಲಿ ಅವ್ಯವಸ್ಥೆಯೊಂದನ್ನು ನೋಡಿದರೇ ನಿಜಕ್ಕೂ ಬೇಸರ ಮೂಡಿಸುತ್ತದೆ.ಅಷ್ಟಕ್ಕೂ ಆ ಮಠ ಯಾವುವು ಅಲ್ಲಿ ಆಗಿರುವುದು ಎನು ಅಂತೀರಾ ಈ ಸ್ಟೋರಿ ನೋಡಿ..

ವಾಣಿಜ್ಯನಗರಿ ಹುಬ್ಬಳ್ಳಿಯ ಸಿದ್ಧಾರೂಡರ ಮಠ ಉತ್ತರ ಕರ್ನಾಟಕ ಭಾಗದ ಜನರಿಗೆ ಮಾತ್ರವಲ್ಲದೆ ರಾಜ್ಯದ ಹಾಗೂ ದೇಶದ ಮೂಲೆಮೂಲೆಗಳಲ್ಲಿ ಭಕ್ತ ಸಾಗರವೇ ಇದೆ. ಸಿದ್ಧಾರೂಡರ ಕೀರ್ತಿ ಅಪಾರವಾಗಿ ಜಗದಗಲ ಪಸರಿಸಿದೆ.ಆದರೆ ಇಲ್ಲಿರುವ ಶೌಚಾಲಯಗಳು ಮಾತ್ರ ಅವ್ಯವಸ್ಥೆ ತಾಣವಾಗಿದ್ದು,ಆಡಳಿತ ಮಂಡಳಿ ಕಣ್ಣು ತೆರೆದು ನೋಡಬೇಕಿದೆ.ಹೌದು..ಸ್ವಚ್ಚತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿರುವ ಸಿದ್ಧಾರೂಡರ ಮಠದಲ್ಲಿಯೇ ಇಂತಹ ಅವ್ಯವಸ್ಥೆ ಗೋಚರವಾಗುತ್ತಿರುವುದು ಕಪ್ಪು ಚುಕ್ಕೆಯಂತಾಗಿದೆ.

ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಎಲ್ಲೆಡೆಯೂ ಸ್ವಚ್ಚತೆಗೆ ಆದ್ಯತೆ ನೀಡಲಾಗುತ್ತಿದೆ.ಹು-ಧಾ ಮಹಾನಗರ ಜನತೆಗೆ ಸ್ವರ್ಗ ಸಮಾನವಾದ ಶ್ರೀಮಠದಲ್ಲಿ ಇಂತಹ ವ್ಯವಸ್ಥೆ ಅಸಮಾಧಾನವನ್ನುಂಟು ಮಾಡಿದೆ.ಕೂಡಲೇ ಆಡಳಿತ ಮಂಡಳಿಯ ಸೂಕ್ತ ಕ್ರಮ ಜರುಗಿಸಿ ಸ್ವಚ್ಚತೆಯತ್ತ ಗಮನ ಹರಿಸಬೇಕಿದೆ.

Edited By : Manjunath H D
Kshetra Samachara

Kshetra Samachara

13/01/2021 11:22 am

Cinque Terre

53.04 K

Cinque Terre

10

ಸಂಬಂಧಿತ ಸುದ್ದಿ