ಹುಬ್ಬಳ್ಳಿ: ಕಾನೂನು ಮಾಪನಶಾಸ್ತ್ರ ಇಲಾಖೆ ವತಿಯಿಂದ ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ 2020-21 ನೇ ಡಿಸೆಂಬರ್ ಅಂತ್ಯಕ್ಕೆ 1,11,40,355 ರೂಪಾಯಿ ಸತ್ಯಾಪನೆ ಶುಲ್ಕ ವಸೂಲಿ ಮಾಡಲಾಗಿದೆ.
ಈ ಅವಧಿಯಲ್ಲಿ 6718 ಸಂಸ್ಥೆಗಳ ತೂಕ, ಅಳತೆ ಸಾಧನಗಳನ್ನು ಪರಿಶೀಲಿಸಿ ಮುದ್ರೆ ಹಾಕಲಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಮಾಸ್ಕ್, ಸ್ಯಾನಿಟೈಸರ್ ಹಾಗೂ ಕಿರಾಣಿ ಸಾಮಾನುಗಳನ್ನು ಅಧಿಕ ದರಕ್ಕೆ ಮಾರಾಟ ಮಾಡುತ್ತಿದ್ದ ಅಂಗಡಿಗಳ ತಪಾಸಣೆ ನೆಡಸಿ, ಕಾಯ್ದೆ ಉಲಂಘನೆಗಾಗಿ 510 ಮೊಕದ್ದಮೆ ದಾಖಲಿಸಿ, 9,69,300 ರೂಪಾಯಿ ದಂಡ ವಸೂಲಿ ಮಾಡಲಾಗಿದೆ ಎಂದು ಸಹಾಯಕ ನಿಯಂತ್ರಕ ಮಧುಕರ.ಆರ್.ಘೋಡಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
12/01/2021 06:44 pm