ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಸತತ ಮಳೆಯಿಂದ ಬೆಂಡಲಗಟ್ಟಿ ಗ್ರಾಮದಲ್ಲಿ ಮನೆ ಸಂಪೂರ್ಣ ಕುಸಿತ

ಕಲಘಟಗಿ: ಸತತ ಮಳೆಯಿಂದಾಗಿ ಕಲಘಟಗಿ ತಾಲೂಕಿನ ಬೆಂಡಲಗಟ್ಟಿ ಗ್ರಾಮದ ಪರಸಪ್ಪ ಮಲ್ಲೇಶಪ್ಪ ನಾಗೋಜಿ ಎಂಬುವರ ಮನೆ ಸಂಪೂರ್ಣ ಬಿದ್ದಿರುವ ಘಟನೆ ನಡೆದಿದೆ.

ತುಂಬ ಹಳೆಯ ಮನೆ ಇದಾಗಿದ್ದು ಮನೆಯಲ್ಲಿ ಟಿವಿ ಹಾಗೂ ಇನ್ನಿತರೆ ವಸ್ತುಗಳು ಒಡೆದು ಹೋಗಿವೆ. ಇನ್ನು ಬಹಳಷ್ಟು ವಸ್ತುಗಳಿಗೆ ಹಾನಿಯಾಗಿದೆ. ಅದೆ ರೀತಿ ಮನೆಯಲ್ಲಿ ದನಕರುಗಳಿಗೆ ಗಾಯಗಳಾಗಿದ್ದು ಯಾವದೆ ರೀತಿಯಾದ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಮನೆಯ ಮಾಲಿಕರಾದ ಪರಸಪ್ಪ ಅವರು ತಿಳಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಆಗಿರುವಂತ ನಷ್ಟಕ್ಕೆ ಶೀಘ್ರವಾಗಿ ಪರಿಹಾರ ನೀಡಬೇಕೆಂದು ಸರಕಾರಕ್ಕೆ ಮನವಿಮಾಡಿದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

11/07/2022 06:29 pm

Cinque Terre

66.67 K

Cinque Terre

0

ಸಂಬಂಧಿತ ಸುದ್ದಿ