ಕುಂದಗೋಳ : ಈ ಸರ್ಕಾರ ಕೊರೊನಾ ಕಾರಣ ಕುಗ್ಗಿ ಹೋಗಿರುವ ಬೀದಿ ಬದಿ ವ್ಯಾಪಾರಸ್ಥರ ಉತ್ತೇಜನಕ್ಕಾಗಿ ಜಾರಿಗೆ ತಂದಿರುವ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಸ್ಥರಿಗಳ ಆತ್ಮ ನಿರ್ಭರ ಯೋಜನೆ ಸಾಲ ಸೌಲಭ್ಯದ ಪರಿಸ್ಥಿತಿ ದೇವರು ವರ ಕೋಟ್ರು ಪೂಜಾರಿ ವರ ಕೊಡದಂತಾಗಿದೆ ನೋಡಿ.
ಕುಂದಗೋಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಸ್ಥರು ಸಾಲ ಸೌಲಭ್ಯಕ್ಕಾಗಿ ಪಟ್ಟಣ ಪಂಚಾಯಿತಿಗೆ 89 ಅರ್ಜಿ ಸಲ್ಲಿಸಿದ್ದು ಆ ಪೈಕಿ 26 ಜನರಿಗೆ ಸಾಲ ಮಂಜೂರಾಗಿದೆ. ಆದ್ರೆ ಈ ಸಾಲವನ್ನು ಪಡೆಯಲು ಬ್ಯಾಂಕ್ ಹೋದ್ರೆ ಸರ್ಕಾರವೇ ನಿರ್ದೇಶಿಸಿರುವ 50 ರೂ ಕರಾರು ಪತ್ರದ ಬಾಂಡ್ ಬದಲಾಗಿ 200 ಬಾಂಡ್ ಕೊಡುವಂತೆ ಬ್ಯಾಂಕ್ ಅಧಿಕಾರಿಗಳ ಸಾಲ ಬೇಡಿದವರಿಗೆ ತಿಳಿಸಿದ್ದು, ಕುಂದಗೋಳ ಹೊರತು ಪಡಿಸಿ ಬೇರೆಡೆಯಿಂದ ಬಂದು ಪಟ್ಟಣದಲ್ಲಿ ಲೈಸೆನ್ಸ್ ಹೊಂದಿ ವ್ಯಾಪಾರ ಮಾಡುವವರಿಗೆ ಕುಂದಗೋಳದ ಬ್ಯಾಂಕ್ ಒಳಗೆ ಖಾತೆ ಹೊಂದಿದ್ದರು ಸಾಲ ಸೌಲಭ್ಯ ನೀಡದೆ ನಿಮ್ಮೂರಿನ ಬ್ಯಾಂಕ್ ಒಳಗೆ ಹಣ ಪಡೆಯಿರಿ ಎನ್ನುತ್ತಿದ್ದಾರೆ ಈ ಬಗ್ಗೆ ಬೀದಿ ವ್ಯಾಪಾರಿಗಳ ಅಳಲಿನ ಸ್ಟೋರಿಯನ್ನ ನೋಡ್ಬಿಡಿ.
Kshetra Samachara
03/11/2020 11:57 am