ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ದೊಡ್ಡ ದೊಡ್ಡ ಸಾಹುಕಾರಗೆ ಹೊಲ ಮಾರಕ ನಿಂತಾರ

ನವಲಗುಂದ: ಭೂ ಸುದಾರಣೆ ಕಾಯ್ದೆಗೆ ತಿದ್ದುಪಡಿ ತಂದು ಕೃಷಿಕರಲ್ಲದವರೂ ಕೃಷಿ ಭೂಮಿ ಖರೀದಿಸಲು ಅವಕಾಶ ನೀಡುವಂತೆ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲು ಸರಕಾರ ಮುಂದಾಗಿರುವುದು ಅವೈಜ್ಞಾನಿಕ. ಸರಕಾರ ಕೃಷಿ ಭೂಮಿ ಮುಕ್ತ ಖರೀದಿಗೆ ವಿಧಿಸಲಾಗಿದ್ದ ನಿರ್ಬಂಧ ತೆರವುಗೊಳಿಸುವ ಮೂಲಕ ರಾಜ್ಯದ ರೈತರನ್ನ ಪ್ರಪಾತಕ್ಕೆ ನೂಕಲು ಮುಂದಾಗಿದೆ. ಎಂದು ಮಹದಾಯಿ ಕಳಸಾ ಬಂಡೂರಿ ರೈತ ಹೋರಾಟ ಸಮಿತಿಯ ರೈತ ಮುಖಂಡರಾದ ಡಿ. ವಿ. ಕುರಹಟ್ಟಿ ಮಾತನಾಡಿದವರು

ಈ ತಿದ್ದುಪಡಿಯಿಂದ ಕೈಗಾರಿಕೋದ್ಯಮದ ದೊಡ್ಡ ದೊಡ್ಡ ಸಾಹುಕಾರರು ಹೊಲ ತೆಗೆದುಕೊಳ್ಳುತ್ತಾರೆ. ರೈತರು ಹೊಲ ಮಾರಿ ಕೂಲಿ ಕೆಲಸಕ್ಕೆ ಹೋಗ್ಬೇಕು ಇಂತಹ ನೀತಿ ಜಾರಿಗೆ ಮಾಡುತ್ತಿದ್ದಾರ,

ಅತಿವೃಷ್ಟಿಯಿಂದಾಗಿ ಬೆಳೆ ನಾಶಗೊಂಡವು ಇದಕ್ಕೆ ಪರಿಹಾರ ನೀಡುವುದು ಬಿಟ್ಟು, ಕಳಸಾ-ಬಂಡೂರಿ ನದಿ ಜೋಡಣೆ ಕೆಲಸ ಮಾಡೋ ಬಿಟ್ಟು, ಬೆಳೆ ವಿಮೆ ಕೊಡೋದು ಬಿಟ್ಟು, ಇಂತಹ ಹೊಲಸು ಕಾನೂನುಗಳನ್ನು ಜಾರಿಗೆ ತರುತ್ತಿದ್ದಾರ,

ನವಲಗುಂದ ಮೊರಬ ಹೋಬಳಿಯಲ್ಲಿ ಮೆಣಸಿನಕಾಯಿ ಹೆಚ್ಚು ಬೆಳೆಯುವುದಿಲ್ಲ ಈ ಭಾಗಕ್ಕೆ ಬೆಳೆವಿಮೆ ಬಂದಿದೆ, ಈ ಭಾಗದಲ್ಲಿ ಹೆಸರು ಶೇಂಗಾ ಗೋವಿನಜೋಳ ಹೆಚ್ಚು ಬೆಳೆಯುತ್ತಾರೆ ಈ ಬೆಳಗೆ ಬೆಳೆವಿಮೆ ಜಮೆಯಾಗಿರುವುದಿಲ್ಲ ಇಂಥ ಸಮಸ್ಯೆಗಳನ್ನು ವಿಮೆ ಕಂಪನಿ ಜೊತೆ ಚರ್ಚೆಸಿ ವಿಮೆ ನೀಡಿ.

ಇಂತಹ ರೈತ ವಿರೋಧಿ ಕಾನೂನುಗಳನ್ನು ಕೈಬಿಟ್ಟು ರೈತ ಬಾಂಧವರ ಭಾವನಿಗೆ ಸ್ಪಂದಿಸಿ ಎಂದು ಹೇಳಿ ತಸಿಲ್ದಾರ್ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಡಿ. ವಿ. ಕುರಹಟ್ಟಿ, ಸಿದ್ದಪ್ಪ ಮುಪ್ಪಯ್ಯನವರ, ಗುರುನಾಥ್ ಕುಲಕರ್ಣಿ, ಶಿವಪ್ಪ ಸಂಗಳದ, ಗುರಪ್ಪ ಗಡ್ಡಿ, ಮುತ್ತಪ್ಪ ಕುಲಕರ್ಣಿ, ಶಂಕ್ರಪ್ಪ ಸಂಘಟಿ, ಮಲ್ಲೇಶ್ ಉಪ್ಪಾರ, ರವಿ ತೋಟದ, ಅನೇಕ ರೈತಬಾಂಧವರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

28/09/2020 03:37 pm

Cinque Terre

14.42 K

Cinque Terre

0

ಸಂಬಂಧಿತ ಸುದ್ದಿ