ನವಲಗುಂದ: ಅದು ಮುಂಜಾನೆ ನಾಲ್ಕು ಗಂಟೆ.. ಸುರಿಯುತ್ತಿರುವ ಮಳೆಯ ನಡುವೆ ಹಸಿವಿನಿಂದ ಹಸುಗೂಸಿನ ಅಳು ತಾಯಿಯನ್ನು ಬಡಿದೆಬ್ಬಿಸಿತ್ತು. ತಾಯಿ ಎದ್ದು ನೋಡೋ ಹೊತ್ತಿಗೆ ಗೋಡೆ ಕುಸಿಯುವ ಮುನ್ಸೂಚನೆ ಕಂಡಿದೆ. ಕೂಡಲೇ ಗಂಡನನ್ನು ಎಬ್ಬಿಸಿ, ಎಲ್ಲರೂ ಮನೆಯಿಂದ ಹೊರಗೆ ಹೋಗ್ತಿದ್ದ ಹಾಗೆ ಗೋಡೆ ಕುಸಿದು ಬಿದಿದ್ದೆ.
ಎಸ್... ಈ ಘಟನೆ ನಡೆದದ್ದು, ಕಳೆದ ಬುಧವಾರ ನವಲಗುಂದ ಪಟ್ಟಣದ ಬಸವೇಶ್ವರ ನಗರದಲ್ಲಿನ ವಾರ್ಡ್ ನಂಬರ್ 22 ರಲ್ಲಿ. ಇಲ್ಲಿನ ನಿವಾಸಿ ರಮೇಶ ಯಲ್ಲಪ್ಪಗೌಡ ಪಾಟೀಲ ಅವರ ಮನೆಯ ಒಂದು ಗೋಡೆ ಬೆಳಗಿನ ಜಾವ ನಾಲ್ಕು ಗಂಟೆಗೆ ಕುಸಿದು ಬಿದಿದೆ. ಅದೃಷ್ಟವಶಾತ್ ದಂಪತಿ ಹಾಗೂ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ಮನೆಯ ಉಳಿದ ಗೋಡೆಗಳು ಸಹ ಬಿರುಕು ಬಿಟ್ಟಿವೆ. ಮಳೆ ಬಂದಾಗ ಮನೆಯಲ್ಲಿರೋದೇ ಈಗ ಕುಟುಂಬಕ್ಕೆ ಸವಾಲಾಗಿದೆ. ಅಷ್ಟೇ ಅಲ್ಲದೆ ಬಾಡಿಗೆ ಮನೆಗೆ ಹೋಗಿ ಇದ್ದರಾಯ್ತು ಅಂದ್ರೆ ಕಡಿಮೆ ಹಣಕ್ಕೆ ಬಾಡಿಗೆಗೆ ಮನೆ ಸಹ ದೊರಕುತ್ತಿಲ್ಲ. ಹೆಚ್ಚಿನ ಹಣ ನೀಡಿ, ಬಾಡಿಗೆಗೆ ಇರಲು ಕುಟುಂಬ ಅಷ್ಟು ಶಕ್ತವೂ ಇಲ್ಲ. ಹೆಚ್ಚಿನ ಪರಿಹಾರ ನೀಡಿ, ಸಂಕಷ್ಟದಲ್ಲಿ ಸಿಲುಕಿದ ಕುಟುಂಬಕ್ಕೆ ಸರ್ಕಾರ ಆಸರೆ ಆಗಬೇಕಿದೆ.
ಅಧಿಕಾರಿಗಳು, ಪುರಸಭೆ ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ತರ ಸಮಸ್ಯೆಗೆ ಸ್ಪಂದನೆ ನೀಡಿದ್ದಾರೆ. ಆದರೆ ಸರ್ಕಾರದ ಪರಿಹಾರದ ಹಣ ಸಂತ್ರಸ್ತರ ಕೈಗೆ ಯಾವಾಗ ಸಿಗುತ್ತೋ ಗೊತ್ತಿಲ್ಲ. ಈ ದುಸ್ಥಿತಿ ಕೇವಲ ಇದೊಂದೇ ಕುಟುಂಬದ್ದಲ್ಲ. ರಾಜ್ಯ ಹಾಗೂ ಜಿಲ್ಲೆಯಲ್ಲಿ ಹಾನಿಗೊಳಗಾದ ಮನೆ ಹಾಗೂ ಬೆಳೆ ಬೆಳೆದ ಪ್ರತಿ ರೈತರ ಹಾಗೂ ಸಂತ್ರಸ್ತರ ಗೋಳು ಇದು. ಸರ್ಕಾರ ಕೂಡಲೇ ಸಂತ್ರಸ್ತರಿಗೆ ಸ್ಪಂದಿಸಿ, ಮೊದಲು ಪರಿಹಾರ ಬಿಡುಗಡೆ ಮಾಡಬೇಕಿದೆ.
ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ
Kshetra Samachara
17/09/2022 05:35 pm