ಹುಬ್ಬಳ್ಳಿ: ಧಾರವಾಡ ಜಿಲ್ಲೆಯಾದ್ಯಂತ ವರುಣನ ಅಬ್ಬರ ಜೋರಾಗಿದೆ.ಪರಿಣಾಮ ಹಳ್ಳವೊಂದು ತುಂಬಿ ಹರಿದಿದ್ದರಿಂದ ಪ್ರವಾಹದಲ್ಲಿ ಸಿಲುಕಿರುವ ಆರು ಜನರನ್ನು ಅಗ್ನಿಶಾಮಕ ಸಿಬ್ಬಂದಿ ಹಾಗೂ ಹುಬ್ಬಳ್ಳಿಯ ತಹಶಿಲ್ದಾರ ರಕ್ಷಣೆ ಮಾಡುವ ಮೂಲಕ ಮಹತ್ವದ ಕಾರ್ಯ ಮಾಡಿದ್ದಾರೆ.
ಏಕಾಏಕಿ ಉಕ್ಕಿ ಹರಿದ ಹಳಿಯಾಳ- ಕಡಪಟ್ಟಿ ಗ್ರಾಮದ ಹಳ್ಳದಿಂದ ಪ್ರವಾಹ ಉಂಟಾಗಿ ಪ್ರವಾಹದಲ್ಲಿ ಆರು ಜನರು ಸಿಲುಕಿಕೊಂಡಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ದೌಡಾಯಿಸಿದ ಹುಬ್ಬಳ್ಳಿ ಗ್ರಾಮೀಣ ತಹಶಿಲ್ದಾರ ಪ್ರಕಾಶ ನಾಶಿ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಬೋಟ್ ಸಹಾಯದಿಂದ ಆರು ಜನರ ರಕ್ಷಿಸಿದ್ದಾರೆ.
ಇನ್ನೂ ಜಿಲ್ಲೆಯಲ್ಲಿ ಮಳೆರಾಯ ಸಾಕಷ್ಟು ಅವಘಡ ಸೃಷ್ಟಿಸುತ್ತಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಸ್ಥಳಕ್ಕೆ ತಹಶಿಲ್ದಾರ ಪ್ರಕಾಶ್ ನಾಶಿ ಭೇಟಿ ನೀಡಿ ನೇತೃತ್ವ ವಹಿಸಿಕೊಂಡು ಕಾರ್ಯಾಚರಣೆ ನಡೆಸಿದ್ದಾರೆ.
Kshetra Samachara
06/09/2022 08:50 am