ಹುಬ್ಬಳ್ಳಿ: ಜಿಲ್ಲೆಯಾದ್ಯಂತ ವಾರದಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ವರುಣನ ಆರ್ಭಟಕ್ಕೆ ಹುಬ್ಬಳ್ಳಿಯಲ್ಲೊಂದು ಮನೆ ಗೋಡೆ ಕುಸಿದಿದೆ.
ಹೌದು. ಹುಬ್ಬಳ್ಳಿ ಕಮರಿಪೇಟೆ ನಿವಾಸಿ ಮುರುಳಿಧರ್ ಇರಕಲ್ ಎಂಬುವರ ಮನೆಯ ಗೋಡೆ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇನ್ನೂ ಮನೆಯ ಹತ್ತಿರ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ಜಖಂಗೊಂಡಿದ್ದು, ಮನೆಯಲ್ಲಿರುವ ವಸ್ತುಗಳಿಗೆ ಹಾನಿಯಾಗಿದೆ.
Kshetra Samachara
11/07/2022 10:18 pm