ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಗಣಿಗಾರಿಕೆ ನಡೆದಿರುವುದು ಸುಳ್ಳು.ಅಧಿಕಾರಿಗಳಿಂದ ಸ್ಪಷ್ಟನೆ!

ಅಳ್ನಾವರ: ಹುಲಿಕೇರಿ ಇಂದಿರಮ್ಮನ ಕೆರೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆಯಾ ಎಂಬ ಅಂಶವನ್ನಳಗೊಂಡ ಸುದ್ದಿಯೊಂದು ನಿಮ್ಮ ಪಬ್ಲಿಕ್ ನೆಕ್ಸ್ಟ್ ನಲ್ಲಿ ಕಳೆದ ಹದಿನೈದು ದಿನಗಳ ಹಿಂದೆ ಪ್ರಸಾರ ವಾಗಿತ್ತು.ಸುದ್ದಿ ಪ್ರಸಾರವಾದ ಬೆನ್ನಲ್ಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಅದನ್ನ ಪರಿಶೀಲಿಸಿದ ನಂತರ ತಿಳಿದು ಬಂದ ಸತ್ಯವೇನೆಂದರೆ, ಕೆರೆಯಿಂದ ಕಲ್ಲನ್ನು ತಂದಿದ್ದು ಸತ್ಯ.ಆದರೆ ಅದು ಗಣಿಗಾರಿಕೆಗೆ ಅಲ್ಲ.ಗ್ರಾಮದ ದೇವಸ್ಥಾನದ ಅಭಿವೃದ್ಧಿಗೋಸ್ಕರ ಪಂಚರ ಸಮ್ಮುಖದಲ್ಲಿ ತರಲಾಗಿದೆ.

ಕಲ್ಪನೆಗೂ ನಿಲುಕದ ಹಾಗೆ ಕಳೆದೆರಡು ವರ್ಷದ ಹಿಂದೆ ಸುರಿದ ಅಕಾಲಿಕ ಮಳೆಗೆ ಹುಲಿಕೇರಿ ಇಂದಿರಮ್ಮನ ಕೆರೆ ಉಕ್ಕಿ,ತಡೆಗೋಡೆ ಒಡೆದು ನೀರು ರಭಸದಿಂದ ಹರಿಯತೊಡಗಿತು.ನೀರು ಹರಿಯುವ ರಭಸಕ್ಕೆ ಕಲ್ಲುಗಳು ದಂಡೆಗೆ ಬಂದು ಬಿದ್ದಿದ್ದವು.ಇದಲ್ಲದೆ ಕೆರೆ ತಡೆಗೋಡೆ ಕಾರ್ಯ ಪ್ರಾರಂಭವಾದ ಹಿನ್ನೆಲೆಯಲ್ಲಿ ಕೆಲಸ ಮಾಡುವಾಗ ಬಂದ ಕಲ್ಲುಗಳನ್ನ ಗ್ರಾಮದ ದೇವಸ್ಥಾನದ ಅಭಿವೃದ್ದಿಗಾಗಿ ಹಿರಿಯರ,ಗ್ರಾಮಸ್ಥರ ಸಮ್ಮುಖದಲ್ಲಿ ತರಲಾಗಿದೆ. ವಿನಹಃ ಗಣಿಗಾರಿಕೆ ನಡೆದಿಲ್ಲ ಎಂದು 'ಸರ್ವೋದಯ ಸಮಗ್ರ ಕೆರೆ ಬಳಕೆದಾರರ ಸಂಘ'ದ ಅಧ್ಯಕ್ಷ ಶಿವಾಜಿ ಡೊಳ್ಳಿನ ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದರು.

ಹುಲಿಕೇರಿ ಇಂದಿರಮ್ಮನ ಕೆರೆ ತಡೆಗೋಡೆ ಕಾರ್ಯವು ಅತ್ಯಂತ ಗುಣಮಟ್ಟದಿಂದ ನಡೆಯುತ್ತಿದ್ದು ಇದರಲ್ಲಿ ಯಾವುದೇ ಲೋಪದೋಷ ವಿರುವುದಿಲ್ಲ.ಕೆರೆ ಅಭಿವೃದ್ಧಿ ಗಾಗಿ,ಗ್ರಾಮದ ಹಿತಕ್ಕಾಗಿ 'ಸರ್ವೋದಯ ಸಮಗ್ರ ಕೆರೆ ಬಳಕೆದಾರರ ಸಂಘ'ಸದಾ ಸಿದ್ದ ಎಂದು ಶಿವಾಜಿ ಡೊಳ್ಳಿನ ಹಾಗೂ ಸದಸ್ಯರು ವಿವರಿಸಿದರು.

ಮಹಾಂತೇಶ ಪಠಾನಿ ,ಪಬ್ಲಿಕ್ ನೆಕ್ಸ್ಟ್ ಅಳ್ನಾವರ.

Edited By : Manjunath H D
Kshetra Samachara

Kshetra Samachara

04/07/2022 09:48 pm

Cinque Terre

39.31 K

Cinque Terre

0

ಸಂಬಂಧಿತ ಸುದ್ದಿ