ಕಲಘಟಗಿ: ಪಟ್ಟಣದಾದ್ಯಂತ ಇರುವ ಸಣ್ಣ ಕೆರೆಗಳು ನಿರ್ವಹಣೆ ಇಲ್ಲದೇ ಕೆರೆಗಳು ಕೊಳಚೆ ತುಂಬಿ ರೋಗ ಹರಡುವ ಸ್ಥಿತಿ ಬಂದಿದೆ.
ಪಟ್ಟಣದ ರಾಷ್ಟ್ರೀಯ ಹೆದ್ದಾರಿ 63ರ ಬಳಿ ಇರುವ ಆಂಜನೇಯನ ಕೆರೆ ಊರಿನ ಗಲೀಜು ಹಾಗೂ ಪ್ಲಾಸ್ಟಿಕ್ ಹಾಗೂ ಇನ್ನಿತರ ನಿರುಪಯುಕ್ತ ಔಷಧ ಬಾಟಲಿಗಳನ್ನ ಸಾರ್ವಜನಿಕರು ಚೆಲ್ಲುತ್ತಿರುವುದರಿಂದ ತುಂಬಿ ಕೊಳೆತು ವಾಸನೆ ಬರುತ್ತಿದೆ. ಸಾರ್ವಜನಿಕರು ಓಡಾಡಲು ಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಈ ಕೆರೆ ಬಸ್ ನಿಲ್ದಾಣದ ಪಕ್ಕದಲ್ಲೇ ಇರುವುದರಿಂದ ಪರ ಊರಿನಿಂದ ಬಂದವರಿಗೆ ಮೊದಲು ಕಂಡು ಬರುವುದೇ ಈ ಕೆರೆ. ಇನ್ನು ಕೆರೆ ಸುತ್ತಮುತ್ತಲಿನ ಅಂಗಡಿ ಮಾಲೀಕರು ಕೆರೆಯ ಜಾಗವನ್ನ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿದ್ದಾರೆ.
ಇದರಂತೆಯೇ ಪಟ್ಟಣದ ಶಾಲೆಯ ಪಕ್ಕದಲ್ಲಿ ಇರುವ ಖಾನಹೊಂಡದ ಸುತ್ತಮುತ್ತಲಿನ ಜಾಗವಂತೂ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಹಳಿಯಾಳ ರಸ್ತೆಯ ಪಕ್ಕದ ಹೇಸಿಗೆ ಕೆರೆ ಸಂಪೂರ್ಣ ಒತ್ತುವರಿಯಾಗಿದ್ದು ನಿರ್ವಹಣೆ ಕಾಣದೇ ಇಲ್ಲಿ ಕೆರೆ ಇತ್ತು ಎನ್ನೋದನ್ನೇ ಜನ ಮರೆತುಬಿಟ್ಟಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದ್ದಾರೆ.
Kshetra Samachara
19/02/2022 01:44 pm