ಧಾರವಾಡ: ಇನ್ನು ಮೂರು ತಿಂಗಳಲ್ಲಿ ಪಾರ್ಶ್ವವಾಯು ಹಾಗೂ ಹೃದಯಾಘಾತದಂತಹ ಕಾಯಿಲೆಗಳಿಂದ ಹೆಚ್ಚು ಜನ ಸಾಯುತ್ತಾರೆ. ಪ್ರಕೃತಿ ವಿಕೋಪಗಳು ಹೆಚ್ಚಾಗಿ ಜನ ತೊಂದರೆ ಅನುಭವಿಸುತ್ತಾರೆ ಎಂದು ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಮಳೆ, ಗಾಳಿ, ಗುಡುಗು ಹೆಚ್ಚಾಗಲಿದೆ. ಬೆಂಕಿಯಿಂದ ತೊಂದರೆ, ಮತಾಂಧತೆ ಹೆಚ್ಚಳವಾಗಿ ಸಾವು ನೋವುಗಳು ಆಗುತ್ತವೆ ಎಂದು ನಾನು ಮೊದಲೇ ಹೇಳಿದ್ದೆ. ಇನ್ನು ಮುಂದೆ ಕೂಡ ಭೂಮಿ ನಡುಗುತ್ತದೆ. ಭೂಮಿ ಕುಸಿಯುತ್ತದೆ. ರೋಗ ಹೆಚ್ಚಾಗುತ್ತವೆ. ಮಳೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ಕಾರ್ತಿಕ ಮಾಸದಲ್ಲಿ ಜನರಿಗೆ ತೊಂದರೆಯಾಗುವ ಲಕ್ಷಣಗಳಿವೆ. ಮಳೆಯಿಂದ, ರೋಗದಿಂದ ಹಾಗೂ ಭೂಮಿಯಿಂದ ತೊಂದರೆಗಳಾಗುತ್ತವೆ. ಈ ಹಿಂದೆ ಹೇಳಿದಂತೆ ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುತ್ತವೆ. ಈಗಲೂ ಅಂತಹ ಪರಿಸ್ಥಿತಿ ಇದೆ. ಭೂಮಿಯಲ್ಲಿರುವ ವಿಷಜಂತುಗಳು ಹಾಗೂ ಪ್ರಾಣಿಗಳು ಹೊರ ಬಂದು ಜನರಿಗೆ ತೊಂದರೆ ಕೊಡುವ ಪ್ರಸಂಗ ಬಹಳಷ್ಟಿದೆ ಎಂದಿದ್ದಾರೆ.
ಪ್ರಕೃತಿಯಿಂದ ಅಲ್ಲೋಲ ಕಲ್ಲೋಲವಾಗುವ ಸಾಧ್ಯತೆ ಇದೆ. ಈ ಹಿಂದೆ ಅಚ್ಛರಿಯ ಅವಘಡವೊಂದು ಕಾದಿದೆ ಎಂದು ಹೇಳಿದ್ದೆ. ಅದನ್ನು ಕಾದು ನೋಡಿ. ಬೆಂಕಿಯಿಂದ ಹೆಚ್ಚು ಸಮಸ್ಯೆ ಇದೆ. ಅಪಮೃತ್ಯುಗಳು ಹೆಚ್ಚಾಗುತ್ತವೆ. ಒಂದೆಡೆ ಪ್ರಕೃತಿ ವಿಕೋಪ ಮತ್ತೊಂದೆಡೆ ಮತಾಂಧತೆ ಹೆಚ್ಚಾಗಿ ಜನರ ಶಾಂತಿ ಕದಡುತ್ತವೆ. ಇನ್ನೊಂದು ವರ್ಷದಲ್ಲಿ ಕೊರೊನಾ ಹೋಗುತ್ತದೆ. ಹೋಗುವಾಗ ವಿಪರೀತ ಕ್ಷಾಮ ಕೊಟ್ಟು ಹೋಗುತ್ತದೆ. ದುಃಖ ಕೊಟ್ಟು ಹೋಗುತ್ತದೆ. ಕುಡಿಯಲು ನೀರು ಇಲ್ಲದಂತೆ ಮಾಡುತ್ತದೆ. ಅಂತಹ ಪ್ರಸಂಗ ಇದೆ. ಜಗತ್ತಿನ ಇತಿಹಾಸದಲ್ಲೇ ಇಂತಹ ರೋಗ ಬಂದಿರಲಿಲ್ಲ ಎಂದರು.
ಜನ ಕಷ್ಟ ಬಂದಾಗ ಮಾತ್ರ ದೇವರು, ಮಠ, ಮಂದಿರ ಎನ್ನುತ್ತಾರೆ. ಆದರೆ, ಕೊರೊನಾ ಬಂದಿದ್ದೇ ಮೊದಲು ದೇವರ ಮೇಲೆ. ಮಠ, ಮಾನ್ಯಗಳ ಮೇಲೆ. ಆಮೇಲೆ ಜನರ ಮೇಲೆ ಬಂತು. ಜನೇವರಿವರೆಗೂ ಕೊರೊನಾ ಹೆಚ್ಚು ಹರಡುವ ಸಾಧ್ಯತೆ ಇದೆ. ಕೊರೊನಾ ಇನ್ನೊಂದು ರೂಪವಾಗುವ ಸಾಧ್ಯತೆಯೂ ಇದೆ ಎಂದರು.
ರಾಜಕೀಯ ಬದಲಾವಣೆ ಬಗ್ಗೆ ಏನೂ ಹೇಳೋದಿಲ್ಲ. ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ಅದಕ್ಕೇಕೆ ನಾನು ಅಪಶಕುನ ನುಡಿಯಲಿ? ರಾಜಕೀಯ ಬದಲಾವಣೆ ಬಗ್ಗೆ ಯುಗಾದಿ ಫಲದ ಮೇಲೆ ಹೇಳುತ್ತೇನೆ. ಶುಭನಾಮ ಸಂವತ್ಸರ ಅಶುಭವನ್ನು ಕೊಟ್ಟು ಹೋಗುತ್ತದೆ. ಜನ ಹೊರಗಡೆ ಹೋಗುವಾಗ ಕೈಯಲ್ಲಿ ಬಡಿಗೆ ಹಿಡಿದುಕೊಂಡು ಹೋಗವುದು ಒಳ್ಳೆಯದು. ಅದು ಸಂರಕ್ಷಣೆಯಾಗುತ್ತದೆ. ಆಶ್ವಿಜ ಕೊನೆಯಿಂದ ಯುಗಾದಿ ಕೊನೆವರೆಗೂ ಅಗಾಂಗ ಕಾಯಿಲೆಗಳು ಬರುತ್ತವೆ ಎಂದು ಭವಿಷ್ಯ ನುಡಿದಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/10/2022 04:22 pm