ಕುಂದಗೋಳ: ನೈರ್ಮಲ್ಯಯುತ ಶೌಚಾಲಯ, ಸ್ವಚ್ಛತೆ, ನೀರಿನ ಸದ್ಭಳಕೆ, ಶಾಲಾ ಆವರಣದ ತುಂಬಾ ಮುಕ್ತವಾದ ಹಸಿರು ಪರಿಸರ, ಮಕ್ಕಳ ಊಟಕ್ಕೆ ಸಿಮೀತವಾದ ಕೊಠಡಿ, ಇಷ್ಟೆಲ್ಲಾ ನೈರ್ಮಲ್ಯ ಶಾಲೆಯೊಂದು ಮಕ್ಕಳ ಆರೋಗ್ಯ ಕಾಪಾಡಿ ಜೊತೆ ಪ್ರಶಸ್ತಿ ಸಹ ಬಾಚಿಕೊಂಡಿದೆ.
ಹೌದು ! ಇದ್ಯಾವ ಶಾಲೆ ಎಂದ್ರಾ ? ಇದು ಕುಂದಗೋಳ ತಾಲೂಕಿನ ಬು.ಕೊಪ್ಪ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಈ ಶಾಲೆಯ ಕಸ ಶೇಖರಣೆ, ಕಸ ವಿಲೇವಾರಿ, ಎರೆಹುಳು ಗೊಬ್ಬರ ತೊಟ್ಟಿ, ಕಾಂಪೋಸ್ಟ್, ಅಬ್ಬಾ ! ಒಂದಾ ಎರೆಡು ಈ ಶಾಲೆ ಸ್ವಚ್ಛ ಭಾರತ್ ಯೋಜನೆಯ ಎಲ್ಲಾ ಮಾದರಿಯಲ್ಲೂ ಸೈ ಎನಿಸಿಕೊಂಡು ಜಿಲ್ಲಾ ಮಟ್ಟದ ಸ್ವಚ್ಛ ವಿದ್ಯಾಲಯ ಪ್ರಶಸ್ತಿ ಪಡೆದಿದೆ.
ಒಟ್ಟು 1700 ಕ್ಕೂ ಹೆಚ್ಚು ಶಾಲೆಗಳನ್ನು ರಾಜ್ಯ ಮಟ್ಟದಲ್ಲಿ ವೀಕ್ಷಣೆ ಮಾಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲಾ ಮಟ್ಟದ ಸ್ವಚ್ಛ ವಿದ್ಯಾಲಯ ಪುರಸ್ಕಾರಕ್ಕೆ ಕುಂದಗೋಳ ತಾಲೂಕಿನ ಬು.ಕೊಪ್ಪ ಗ್ರಾಮದ ಶಾಲೆಯೊಂದನ್ನು ಆಯ್ಕೆ ಮಾಡಿ ರಾಜ್ಯ ಮಟ್ಟಕ್ಕೆ ಶಿಪಾರಸ್ಸು ಮಾಡಿದೆ.
ಇನ್ನೂ ಈ ಶಾಲಾ ವಾತಾವರಣವೇ ಜ್ಞಾನ ದೇಗುಲವಾಗಿದ್ದು ಕಣ್ಣು ಹಾಯಿಸಿದಷ್ಟೂ ಅಕ್ಷರ ಮಾಲೆ ತೆರೆದಿಡುತ್ತವೆ, ಎಲ್ಲದಕ್ಕಿಂತ ಮಿಗಿಲಾಗಿ ಕಿರಿಯ ಪ್ರಾಥಮಿಕ ಶಾಲೆ ಅಂದ್ರೇ 1 ರಿಂದ 5 ನೇ ತರಗತಿ ಮಕ್ಕಳಲ್ಲಿ ಸ್ವಚ್ಛತಾ ಪ್ರಜ್ಞೆ ಬೆಳೆಸಿ ಮಕ್ಕಳಿಂದಲೇ ಎರೆಹುಳು ತೊಟ್ಟಿ, ಕಾಂಪೋಸ್ಟ್ ಗೊಬ್ಬರ ತಯಾರಿಕೆ, ಶೌಚಾಲಯದ ಬಳಕೆ ಹಾಗೂ ಸ್ವಚ್ಛತೆ ಅರಿವು ನೀಡಿದ ಶಿಕ್ಷಕರ ಕಾರ್ಯ ನಿಜಕ್ಕೂ ಗ್ರೇಟ್.
ಒಟ್ಟಿನಲ್ಲಿ ಬು.ಕೊಪ್ಪ ಗ್ರಾಮದ ಶಾಲೆಗೆ ಜಿಲ್ಲಾಧಿಕಾರಿ ಗುರುದತ್ತ್ ಹೆಗಡೆಯವರಿಂದ ಸ್ವಚ್ಛ ಭಾರತ್ ಪುರಸ್ಕಾರ ಒಲಿದು ಬಂದಿರುವುದು ಸಂತಸದ ವಿಷಯವೇ ಸರಿ..
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
29/06/2022 04:33 pm