ಧಾರವಾಡ: ನಿನ್ನೆ ರಾತ್ರಿ ಹಾಗೂ ಇಂದು ಬೆಳಗಿನಜಾವ ಸುರಿದ ಮಳೆಯಿಂದಾಗಿ ಧಾರವಾಡ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೆಳೆ ನಾಶವಾಗಿದ್ದು, ರೈತ ಕಂಗಾಲಾಗಿದ್ದಾನೆ.
ಧಾರವಾಡ ತಾಲೂಕಿನ ತಾಲೂಕಿನ ನಿಗದಿ ಗ್ರಾಮದ ರೈತ ಉಳವಪ್ಪ ಜಗದಪ್ಪನವರ ಅವರ 4 ಎಕರೆ ಜಮೀನಿನಲ್ಲಿ ಬೆಳೆದ ಗೋವಿನ ಜೋಳ ಹಾಗೂ ರಾಮಪ್ಪ ಅಳಗವಾಡಿ ಎಂಬ ರೈತರಿಗೆ ಸೇರಿದ 6 ಎಕರೆ ಪ್ರದೇಶದಲ್ಲಿನ ಮೆಕ್ಕೆ ಜೋಳದ ಬೆಳೆ ಸಂಪೂರ್ಣ ನಾಶವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
Kshetra Samachara
30/08/2022 04:47 pm