ಅಣ್ಣಿಗೇರಿ: ರಾಜ್ಯಾದ್ಯಂತ ಕಳೆದ ಎರಡು ವರ್ಷಗಳಿಂದ ಕೋವಿಡ್ ಮಹಾಮಾರಿಯಿಂದ ಹಬ್ಬಗಳನ್ನು ಸಾರ್ವಜನಿಕರು ಯಾವುದೇ ಆಡಂಬರವಿಲ್ಲದೆ ಸರ್ಕಾರದ ನಿಯಮಗಳಂತೆ ಆಚರಣೆ ಮಾಡುತ್ತಿದ್ದರು.
ಈ ಬಾರಿ ಕೋವಿಡ್ ಕೇಸುಗಳು ಇಲ್ಲದ ಕಾರಣ ಜನ ಹರ್ಷದಿಂದ ಹಬ್ಬಗಳನ್ನು ಆಚರಿಸುತ್ತಿದ್ದಾರೆ. ಸದ್ಯ ರಂಜಾನ್ ಮತ್ತು ಬಸವ ಜಯಂತಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಹಿಂದೂ ಮುಸ್ಲಿಂ ಬಾಂಧವರು ಪಟ್ಟಣದ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಖರೀದಿಯಲ್ಲಿ ಬ್ಯುಜಿಯಾಗಿದ್ದಾರೆ. ಪಟ್ಟಣ ಸೇರಿದಂತೆ ತಾಲೂಕಿನ ಸಾರ್ವಜನಿಕರು ಖರೀದಿಯಲ್ಲಿ ನಿರತರಾಗಿರುವ ದೃಶ್ಯಗಳು ಕಂಡುಬಂದವು.
Kshetra Samachara
03/05/2022 02:53 pm