ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಕೆಸರುಗದ್ದೆಯಂತಾದ ರಸ್ತೆ? ಏನಂತಾರೆ ಪುರಸಭೆ ಮುಖ್ಯಾಧಿಕಾರಿ?

ಅಣ್ಣಿಗೇರಿ: ಕಳೆದ ಹತ್ತು ಹನ್ನೆರಡು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ಪಟ್ಟಣದ ಕೆಲವು ಪ್ರಮುಖ ರಸ್ತೆಗಳು ಕೆಸರುಗದ್ದೆಗಳಂತೆ ಆಗಿದೆ. ಇನ್ನು ಈ ರಸ್ತೆಯಲ್ಲಿ ವಾಹನ ಸವಾರರು, ಪಾದಚಾರಿಗಳು ಹೋಗಿ ಬರುವುದೇ ದೊಡ್ಡ ಸಾಹಸವಾಗಿದೆ.

ಪಟ್ಟಣದ ಅನೇಕ ರಸ್ತೆಗಳು ಸಿಸಿ ರಸ್ತೆಗಳಿಲ್ಲದೆ ಸಂಪೂರ್ಣ ಹಾಳಾಗಿವೆ. ರಸ್ತೆಗಳೆಲ್ಲ ಪೂರ್ತಿ ಕೆಸರುಮಯವಾಗಿದೆ. ಇನ್ನು ಈ ವಿಷಯವಾಗಿ ಪುರಸಭೆ ಮುಖ್ಯಾಧಿಕಾರಿ ಅವರು ನಮ್ಮ ಪ್ರತಿನಿಧಿಯೊಂದಿಗೆ ಏನು ಹೇಳುತ್ತಾರೆ ಕೇಳೋಣ ಬನ್ನಿ

(ಫೋನ್ ಕಾಲ್ ರೆಕಾರ್ಡಿಂಗ್) ಮಾಂತೇಶ್ ನಿಡವಣಿ, ಪುರಸಭೆ ಮುಖ್ಯಾಧಿಕಾರಿ

ಒಟ್ಟಾರೆಯಾಗಿ ಇದಕ್ಕೆ ಶಾಶ್ವತ ಪರಿಹಾರವೆಂದರೆ ಸಿಸಿ ರೋಡ್ ಮಾಡಿಸಿಕೊಡುವಂತೆ ಪುರಸಭೆಯ ಅಧಿಕಾರಿಗಳಿಗೆ ಅಲ್ಲಿನ ನಿವಾಸಿಗಳ ಸೇರಿದಂತೆ ಪಬ್ಲಿಕ್ ನೆಕ್ಸ್ಟ್ ಕಡೆಯಿಂದಲೂ ಮನವಿ ಮಾಡುತ್ತಿದ್ದೇವೆ.

Edited By : Somashekar
Kshetra Samachara

Kshetra Samachara

14/07/2022 07:30 pm

Cinque Terre

27 K

Cinque Terre

2

ಸಂಬಂಧಿತ ಸುದ್ದಿ