ಶಲವಡಿ: ಇಡೀ ಗ್ರಾಮಕ್ಕೆ ನಲ್ಲಿಯಲ್ಲೇ ಮದ್ಯ ಸಪ್ಲೈ..! ಹೋ.. ಇದನ್ನ ಕೇಳಿ ಮದ್ಯ ಪ್ರಿಯರಿಗೆ ಫುಲ್ ಖುಷಿ ಆಗಿರಬೇಕು ಅಲ್ವಾ... ಸರ್ಕಾರದ ಖಜಾನೆ ತುಂಬೋ ಮಂದಿ ನೀವು. ಆದ್ರೆ ಸಾರ್ವಜನಿಕರ ಬಗ್ಗೆ ನೀವು ಕೊಂಚ ಕಾಳಜಿ ತೋರಬೇಕಾದ ಅಗತ್ಯ ಐತಿ ನೋಡ್ರಿಪಾ ಮತ್ತ...
ಕುಡುಕರ ಮಹಾ ಎಡವಟ್ಟಿನಿಂದ ಅಣ್ಣಿಗೇರಿ ತಾಲೂಕಿನ ಶಲವಡಿ ಗ್ರಾಮಕ್ಕೆ ಮದ್ಯ ಸಪ್ಲೈ ಆಗ್ತಾ ಇದೆ. ಹುಃ ಮತ್ತೆ... ಸುಳ್ಳ ಅಲ್ಲ... ಇದನ್ನ ಒಮ್ಮೆ ನೋಡ್ರಿಪಾ....
ನೋಡಿದ್ರಾ...? ಊರಿಗೆ ನೀರ ಸಪ್ಲೈ ಮಾಡ್ತಾರೋ ಇಲ್ಲ ಮದ್ಯ ಸಪ್ಲೈ ಮಾಡ್ತಿದ್ದಾರೋ ಅಂತ ಕನ್ಫ್ಯೂಷ್ ಆಯ್ತು ಅಲ್ವಾ... ಆಗ್ಲೇಬೇಕು ಅಂತ ತಾನೆ ನಮ್ಮ ಮದ್ಯ ಪ್ರಿಯರು ಹೀಗೆ ಮಾಡಿದ್ದು... ಇದೆಲ್ಲ ಎಣ್ಣೆ ಪಾರ್ಟಿ ಮಂದಿ ಗದ್ದಲ ಐತಿ ನೋಡ್ರಿ ಮತ್ತ...
ಮದ್ಯದ ಅಂಗಡಿ ಇಲ್ಲದ ಗ್ರಾಮ ಎಂಬ ಘನತೆಗಾಗಿ ಎಣ್ಣೆ ಅಂಗಡಿ ಮುಚ್ಚಿದ್ರು... ಇದು ಮೆಚ್ಚಬೇಕಾದ ಕೆಲಸ.. ಆದ್ರೆ ಕದ್ದು ಮುಚ್ಚಿ ಮದ್ಯದ ವ್ಯವಹಾರಕ್ಕೆ ಕಡಿವಾಣ ಹಾಕಲಿಲ್ಲ. ಹಿಂಗಾಗಿ ಕೆಲವ್ರು ಎಣ್ಣೆ ಖರೀದಿ ಮಾಡಿ ಕೆರೆಗೆ ಬಂದು ನೀರ ಮಿಕ್ಸ್ ಮಾಡಿಕೊಂಡ ಕುಡಿದ ಹಿಂಗ ಮಾಡ್ತಿದ್ದಾರೆ. ವಾರಕ್ಕೊಮ್ಮೆ ಎಣ್ಣೆ ಪ್ಯಾಕೆಟ್, ಪ್ಲಾಸ್ಟಿಕ್ ಗ್ಲಾಸ್ ಆಯ್ದು ಸುಡೋದೇ ನೀರ ಪೂರೈಕೆ ಮಾಡೋ ಸಿಬ್ಬಂದಿಯ ಒಂದು ಕೆಲಸ ಆಗೈತಿ...
ಸ್ಥಳೀಯ ನಾಯಕರೇ, ಸಂಬಂಧ ಪಟ್ಟ ಅಧಿಕಾರಿಗಳೇ ಇನ್ನಾರ ಈ ಬಗ್ಗೆ ಗಮನ ಹರಿಸಿ.. ನಿಮ್ಮ ನಂಬಿದ ಮಂದಿಗೆ ಶುದ್ಧ ನೀರು ನೋಡ್ರಿಪಾ.
Kshetra Samachara
25/01/2021 09:55 am