ಕುಂದಗೋಳ: ತಾಲೂಕಿನ ಸಂಶಿ ಗ್ರಾಮದ ಪುರಾತನ ಗುಹೆ ನೆಲಕ್ಕೆ ಅಪ್ಪಳಿಸಿದ ಪರಿಣಾಮ ಸುತ್ತ ಮುತ್ತಲಿನ ನಿವಾಸಿಗಳು ತಮ್ಮ ಮನೆ ಬೀಳುವ ಆತಂಕದಲ್ಲಿದ್ದು, ಮನೆ ಬಿಟ್ಟು ಟ್ರ್ಯಾಕ್ಟರ್, ಟೇಲರ್, ದನದ ಕೊಟ್ಟಿಗೆಯಲ್ಲಿ ವಾಸಿಸುತ್ತಿದ್ದಾರೆ.
ಹೌದು. ಕಳೆದ ಹಲವಾರು ದಿನಗಳ ಹಿಂದೆ ಸಂಶಿ ಗ್ರಾಮದ ಗವಿಸಿದ್ದೇಶ್ವರ ದೇಗುಲ ಹೊಂದಿದ್ದ ಪುರಾತನ ಗುಹೆ ನೆಲಕ್ಕೆ ಬಿದ್ದಿದ್ದು, ಇದೀಗ ಆ ಗುಹೆ ದಿನೇ ದಿನೇ ಕುಸಿಯುತ್ತಾ ಸಂಪೂರ್ಣ ಮುಚ್ಚಿ ಹೋಗುವ ಹಂತದಲ್ಲಿದೆ. ಪರಿಣಾಮ ಗುಹೆ ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ಕೆಲ ಸ್ಥಳೀಯರ ಮನೆ ಗೋಡೆ, ಶೌಚಾಲಯ, ಬಣವೆಗಳು ಗುಹೆ ಜೊತೆ ಕೆಳಗೆ ಬಿದ್ದಿದ್ರೇ, ಕೆಲವರ ಮನೆ ಬೀಳುವ ಹಂತದಲ್ಲಿದ್ದು ಗೋಡೆಗಳು ಬಿರುಕು ಬಿಟ್ಟಿವೆ.
ಈ ಹಿಂದೆ ಗುಹೆ ನೆಲಕ್ಕೆ ಬಿದ್ದಾಗ ಸ್ಥಳೀಯ ಶಾಸಕಿ ಕುಸುಮಾವತಿ, ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಸೇರಿದಂತೆ ಅಧಿಕಾರಿಗಳ ವರ್ಗ ಪರಿಶೀಲನೆ ನಡೆಸಿ ಗುಹೆ ಸುತ್ತ 50 ಮೀಟರ್ ವಾಸಿಸದಂತೆ ತಿಳಿಸಿದ್ದರು. ಅದರ ಹೊರತಾಗಿ ಇಲ್ಲಿನ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಇನ್ನೂ ನಾಮಕಾವಸ್ಥೆ ಎಚ್ಚರಿಕೆ ಎಂಬ ಬಿಳಿಹಾಳೆಯ ಬೋರ್ಡ್ ಹಾಕಲಾಗಿದೆ ಹೊರತು ಸೂಕ್ತ ಪೊಲೀಸ್ ಬಂದೋಬಸ್ತ್ ಅಥವಾ ಮನೆ ಬೀಳುವ ಹಂತದಲ್ಲಿರುವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದ ಜನ ಜಾನುವಾರು ಭಯದಿಂದ ಬೀದಿ ಬಯಲಲ್ಲೇ ಬದುಕು ನಡೆಸುತ್ತಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/06/2022 04:54 pm