ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವರುಣಾರ್ಭಟಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತ: ಜನಪ್ರತಿನಿಧಿಗಳೇ ಇತ್ತ ಹರಿಸಿ ನಿಮ್ಮ ಚಿತ್ತ…

ಪಬ್ಲಿಕ್ ನೆಕ್ಸ್ಟ್ ವರದಿ- ಈರಣ್ಣ ವಾಲಿಕಾರ

ಹುಬ್ಬಳ್ಳಿ: ನಿನ್ನೆ ನಿರಂತರ ಸುರಿದ ಭಾರೀ ಮಳೆಯಿಂದಾಗಿ ವಾಣಿಜ್ಯ ನಗರಿ ಹುಬ್ಬಳ್ಳಿಯ ಜನತೆ ತತ್ತರಿಸಿ ಹೋಗಿದ್ದಾರೆ. ಮಳೆ ಅವಾಂತರಕ್ಕೆ ಅದೆಷ್ಟೋ ಮನೆಗಳು ಬಿದ್ದಿವೆ. ಗಟಾರ್ ಕಾಲುವೆ ತುಂಬಿ ನಗರಕ್ಕೆ ನೀರು ನುಗ್ಗಿದೆ. ಜಲಪ್ರಳಯವಾಗಿ ಅದೆಷ್ಟೋ ಪ್ರದೇಶಗಳಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಹೌದು…. ನಿನ್ನೆ ಸಾಯಂಕಾಲ ಏಕಾಏಕಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ. ನದಿಯಂತೆ ನೀರು ಹರಿಯುತ್ತಿದೆ. ಕೆಲವೊಂದು ಪ್ರದೇಶಗಳಲ್ಲಿ ಚರಂಡಿ ಬ್ಲಾಕ್ ಆಗಿ ನೀರೆಲ್ಲ ಹೊರಗೆ ಬಂದು ಕೆರೆಯಂತಾದ ಉದಾಹರಣೆಗಳಿವೆ. ಅಷ್ಟೇ ಅಲ್ಲದೇ ವಾರ್ಡ್ ನಂಬರ್ 77 ರಲ್ಲಿ ಬರುವ ಗೌಸಿಯಾ ನಗರ, ಇಬ್ರಾಹಿಂಪೂರ್ ನ್ಯೂ ಲೇಔಟ್ ಪೂರ್ತಿ ಜಲಾವೃತಗೊಂಡಿದೆ. ರಾತ್ರೋರಾತ್ರಿ ಅಲ್ಲಿನ ನಿವಾಸಿಗಳು ಬೇರೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇನ್ನು ಮನೆ ಒಳಗೆ ನೀರು ನುಗ್ಗಿದ್ದರಿಂದ ಮನೆ ಸಾಮಗ್ರಿ, ಹಲವಾರು ವಸ್ತುಗಳು ನಾಶವಾಗಿವೆ. ವರುಣನ ಆರ್ಭಟಕ್ಕೆ ರಾಜ ಕಾಲುವೆ ಸಹ ಉಕ್ಕಿ ಹರಿದಿದೆ. ಇದರಿಂದ ರಾಜ ಕಾಲುವೆ ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಉಂಟಾಗಿದೆ. ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆ ಹರಿಸಿ ಎಂದು ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳಿಗೆ ಅಲ್ಲಿನ ನಿವಾಸಿಗಳು ಒತ್ತಾಯ ಮಾಡಿದ್ದಾರೆ.

ಒಟ್ನಲ್ಲಿ ಸ್ಮಾರ್ಟ್ ಆಗ್ತಿರೋ ನಮ್ಮ ಹುಬ್ಬಳ್ಳಿ - ಧಾರವಾಡದಲ್ಲಿ ಒಂದು ಚಿಕ್ಕ ಮಳೆ ಬಂದ್ರೆ ಸಾಕು ಚರಂಡಿ ಬ್ಲಾಕ್‌ ಆಗಿ ನೀರೆಲ್ಲ ಹೊರಗೆ ಬರುವುದು ಮಾಮೂಲಿ. ರಾಜ ಕಾಲುವೆಯಿಂದ ಜನರು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಮಳೆ ಸಂಕಷ್ಟಕ್ಕೆ ಸಿಲುಕಿದ್ದವರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ

Edited By : Somashekar
Kshetra Samachara

Kshetra Samachara

11/10/2022 01:05 pm

Cinque Terre

32.73 K

Cinque Terre

2

ಸಂಬಂಧಿತ ಸುದ್ದಿ