ಕುಂದಗೋಳ : ಸರ್ಕಾರಿ ಇಲಾಖೆಗೆ ಜನರು ಅಧಿಕಾರಿಗಳು ಬರುವುದು ಸಹಜ ಆದ್ರೇ. ಅದೇ ಸರ್ಕಾರಿ ಇಲಾಖೆಗೆ ಹಾವು ಬಂದ್ರೇ ಏನು ಕಥೆ ? ಹೌದು ..ಕುಂದಗೋಳ ತಹಶೀಲ್ದಾರ ಕಛೇರಿಯಲ್ಲಿ ಹಾವೊಂದು ಕಾಣಿಸಿಕೊಂಡಿದೆ. ಸುತ್ತ ಕೆಸರು ಅವ್ಯವಸ್ಥೆ ರಾಡಿಯಲ್ಲೇ ಮುಳುಗಿ ಅನೈರ್ಮಲ್ಯದ ಸುಳಿಯಲ್ಲಿರುವ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯದ ಒಳಗೆ ಹಾವೊಂದು ಬಂದು ಅತ್ತಿತ್ತ ಸುತ್ತಿ ಸ್ಥಳೀಯರ ಸಮಯ ಪ್ರಜ್ಞೆಯಿಂದ ಕೊನೆಗೆ ಕಛೇರಿ ಹೊರ ನಡೆದಿದೆ.
ಸದ್ಯ ಕಛೇರಿ ಒಳಗೆ ಹಾವು ಬಂದಿರುವ ಸುತ್ತಲಿನ ಕೆಸರು ರಾಡಿಯ ವಿಡಿಯೋವನ್ನು ಸ್ಥಳೀಯರು ಪಬ್ಲಿಕ್ ನೆಕ್ಸ್ಟ್'ಗೆ ನೀಡಿದ್ದು, ಈ ಹಾವಿಂದ ಅಪಾಯ ಉಂಟಾದ್ರೇ ಏನುಗತಿ ಎಂದು? ಕಛೇರಿಗೆ ಬರುವ ಜನರಿಗೆ ರಕ್ಷಣೆ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ರಕ್ಷಣೆ ಎಲ್ಲಿದೆ ಅಂತಾ ಪ್ರಶ್ನೆ ಶುರು ಮಾಡಿದ್ದಾರೆ.
ಇತ್ತ ಕಛೇರಿ ಸುತ್ತಲಿನ ಅನೈರ್ಮಲ್ಯ ಕೊಳಚೆ ದುರ್ವಾಸನೆ ಪರಿಣಾಮ ಸೊಳ್ಳೆ ಕಾಟ ಸಹ ಮಿತಿ ಮೀರಿದೆ. ಅಧಿಕಾರಿಗಳು ಸಿಬ್ಬಂದಿಗಳು ಕಛೇರಿಗೆ ಬರುವ ಜನಸಾಮಾನ್ಯರಿಗೂ ಸಹ ರೋಗದ ಭೀತಿ ತಲೆದೋರಿದ್ದು ಜನ ತಾಲೂಕು ಆಡಳಿತ ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತಿದ್ದಾರೆ
Kshetra Samachara
14/09/2022 05:40 pm