ಕಲಘಟಗಿ: ಕಲಘಟಗಿ ತಾಲೂಕ ಆಸ್ಪತ್ರೆ ಅವ್ಯವಸ್ಥೆಯ ತಾಣವಾಗಿದೆ. ಇಲ್ಲಿನ ರೋಗಿಗಳು ನಿತ್ಯ ನೂರೆಂಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಇಲ್ಲಿಗೆ ತೆರಳುವ ಆರೋಗ್ಯವಂತರು ಕೂಡ ರೋಗ ಅಂಟಿಸಿಕೊಂಡು ಆಚೆ ಬರುವ ಭಯ ಸೃಷ್ಟಿಯಾಗಿದೆ.
ಇಲ್ಲಿಯ ಶೌಚಾಲಯಗಳು ತುಂಬಿ ಹೋಗಿದ್ದು ಸ್ವಚ್ಛತೆ ಮಾಡಲು ಯಾರೂ ಇಲ್ಲದಂತಾಗಿದೆ. ಆಸ್ಪತ್ರೆಯಲ್ಲಿ ಕುಡಿಯುವ ನೀರು ಸಿಗಲ್ಲ. ಬೆಳಕು ಕೂಡ ಇಲ್ಲ. ಇಲ್ಲಿಗೆ ಬರುವ ರೋಗಿಗಳು ಶೌಚಾಲಯಕ್ಕೆ ಹೊರಗಡೆ ಹೋಗುವ ಪರಿಸ್ಥಿತಿ ಇದೆ.
ಇಷ್ಟೆಲ್ಲ ಅವ್ಯವಸ್ಥೆಯಿಂದ ಕೂಡಿರುವ ತಾಲೂಕ ಸರಕಾರಿ ಆಸ್ಪತ್ರೆಯಲ್ಲಿ ಹೇಳುವವರಿಲ್ಲ, ಕೇಳುವವರಿಲ್ಲದಂತಾಗಿದೆ ಇಲ್ಲಿಯ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಕೂತಿರೋದು ವಿಪರ್ಯಾಸವಾಗಿದೆ. ಕೂಡಲೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತಕಡೆ ಗಮನ ಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/09/2022 03:48 pm