ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಶಲವಡಿ ಮಾರ್ಗವಾಗಿ ನವಲಗುಂದ-ರೋಣ ಸಂಚಾರ ಕಡಿತ

ನವಲಗುಂದ: ಭಾರಿ ಮಳೆಯ ಪರಿಣಾಮ ಅಣ್ಣಿಗೇರಿ ತಾಲೂಕಿನ ಶಲವಡಿ ಹಾಗೂ ಖನ್ನೂರು ಗ್ರಾಮದ ನಡುವಿನ ಹಳ್ಳ ಉಕ್ಕಿ ಹರಿಯುತ್ತಿದ್ದು, ವಾಹನ ಸಂಚಾರ ತಡೆಹಿಡಿಯಲಾಗಿದೆ. ಅಷ್ಟೇ ಅಲ್ಲದೇ ಸೇತುವೆ ಸಂಪರ್ಕಿಸುವ ರಸ್ತೆ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ‌ ಸಂಭಸಿಲ್ಲ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಾಹನ, ಜನ ಸಂಚಾರ ತಡೆದು ಬ್ಯಾರಿಕೇಡ್ ಹಾಕಿದ್ದಾರೆ. ಇದರಿಂದಾಗಿ ಶಲವಡಿ ಮಾರ್ಗವಾಗಿ ನವಲಗುಂದಿಂದ ರೋಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿದೆ. ಹೀಗಾಗಿ ನವಲಗುಂದದಿಂದ ರೋಣಕ್ಕೆ ಹೋಗು, ರೋಣದಿಂದ ನವಲಗುಂದಕ್ಕೆ ಬರುವ ಪ್ರಯಾಣಿಕರು ನರಗುಂದ ಮಾರ್ಗವಾಗಿ ಸಂಚಾರ ಮಾಡಬಹುದಾಗಿದೆ.

Edited By : Somashekar
Kshetra Samachara

Kshetra Samachara

06/09/2022 01:26 pm

Cinque Terre

60.52 K

Cinque Terre

0

ಸಂಬಂಧಿತ ಸುದ್ದಿ