ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆರಂಭವಾಗದ ಬೆಳೆ ಖರೀದಿ ಪ್ರಕ್ರಿಯೆ: ಈಡೇರದ ಸರ್ಕಾರದ ಭರವಸೆ

ಹುಬ್ಬಳ್ಳಿ: ಕಳೆದ ನಾಲ್ಕು ವರ್ಷಗಳಿಂದ ಅನ್ನದಾತನ ಬದುಕು ಹೇಳ ತೀರದಾಗಿದೆ. ಕಷ್ಟ ಪಟ್ಟು ಬೆಳೆದ ಬೆಳೆಗಳು ನೀರಿನಲ್ಲಿ ಕೊಳೆತು ಹೋದರೆ, ಇನ್ನೂ ಕೆಲವು ಬೆಳೆಗಳಿಗೆ ಸೂಕ್ತ ಬೆಲೆ‌ ಇಲ್ಲದಂತಾಗಿದೆ. ಸರ್ಕಾರ ಕೇವಲ ಬಾಯಿ ಮಾತಿನಲ್ಲೇ ಬೆಂಬಲ ಬೆಲೆಯಡಿಯಲ್ಲಿ ಖರೀದಿ ಮಾಡುತ್ತೇವೆಂದು ಘೋಷಣೆ ಮಾಡುತ್ತಾ ಹೊರಟಿವೆ. ಆದರೆ ರೈತ ಬೆಳೆದಂತ ಬೆಳೆಗಳನ್ನು ಸರ್ಕಾರ ಖರೀದಿ ಮಾಡುತ್ತಿಲ್ಲ. ಇದರಿಂದಾಗಿ ರೈತರ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೇ ಪರದಾಡುವಂತಾಗಿದೆ.

ಹೌದು....ಒಂದು ತಿಂಗಳ ಹಿಂದೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೆಸರು ಕಾಳುಗಳನ್ನು ಬೆಂಬಲ ಬೆಲೆಯಡಿಯಲ್ಲಿ ಸರ್ಕಾರ ಖರೀದಿ ಮಾಡುತ್ತೆ ಎಂದು ಹೇಳಿದ್ದರು. ಆದರೆ ಇಲ್ಲಿಯವರೆಗೂ ಒಂದೇ ಒಂದು ಕೆಜಿಯಷ್ಟು ಹೆಸರು ಕಾಳುಗಳನ್ನು ಖರೀದಿ ಮಾಡಿಲ್ಲ. ಕೇವಲ ಬಾಯಿ ಮಾತಿನಲ್ಲಿಯೇ ಖರೀದಿ ಕೇಂದ್ರ ಓಪನ್ ಮಾಡುತ್ತೇವೆಂದು ಹೇಳಿ ಕೈ ತೊಳೆದು ಕೊಂಡಿದ್ದಾರೆ. ಧಾರವಾಡ ಜಿಲ್ಲಾಡಳಿತ ಖರೀದಿ ಮಾಡಲು ರೈತರಿಂದ ನೋಂದಣಿ ಮಾಡಿಕೊಂಡಿದೆ. ಜಿಲ್ಲೆಯಲ್ಲಿ 12230 ರೈತರು ನೋಂದಣಿ‌ ಮಾಡಿಕೊಂಡಿದ್ದಾರೆ. ನೋಂದಣಿ ಕಾರ್ಯ ಮುಗಿದ್ರೂ ಖರೀದಿ ಪ್ರಕ್ರಿಯೆ ಮಾತ್ರ ಆರಂಭವಾಗಿಲ್ಲ. ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್‌ಗೆ 7,755 ರೂಪಾಯಿ ಬೆಂಬಲ ಎಂದು ಘೋಷಣೆ ಮಾಡಿದೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಖರೀದಿ ಕೇಂದ್ರಗಳನ್ನು ಈಗಾಗಲೇ ಆರಂಭಿಸಬೇಕಾಗಿತ್ತು. ಆದ್ರೆ ಅಧಿಕಾರಿಗಳು ಹೆಸರುಕಾಳಿನಲ್ಲಿ ತೇವಾಂಶ ಹೆಚ್ಚಾಗಿದೆ ಎಂದು ಕುಂಟು ನೆಪ ಹೇಳಿ ಖರೀದಿ ಪ್ರಕ್ರಿಯೆ ಮಾಡಿಲ್ಲ.

ಇನ್ನು ಮುಕ್ತ ಮಾರುಕಟ್ಟೆಯಲ್ಲಿ ಕಾಳುಗಳನ್ನು ಮಾರಾಟ ಮಾಡಲು ಸರಿಯಾದ ಬೆಲೆ ಇಲ್ಲ.‌ ಕ್ವಿಂಟಾಲ್‌ಗೆ 5 ರಿಂದ 6 ಸಾವಿರ ಮಾತ್ರ ಮಾರುಕಟ್ಟೆಯಲ್ಲಿ ಸಿಗುತ್ತದೆ. 7755 ರೂಪಾಯಿ ಬೆಂಬಲದಡಿಯಲ್ಲಿ ಒಬ್ಬ ರೈತ 15 ಕ್ವಿಂಟಾಲ್ ಮಾರಾಟ ಮಾಡಬಹುದು. ಆದ್ರೆ ಖರೀದಿ ಪ್ರಕ್ರಿಯೆ ಇಲ್ಲವಾದ್ರೆ ಹೇಗೆ ಮಾರಾಟ ಮಾಡಬೇಕೆಂಬುದು ಅನ್ನದಾತನ ಪ್ರಶ್ನೆ.

ಈಗಾಗಲೇ ಅನ್ನದಾತ ಸಾಲ ಸೂಲ ಮಾಡಿ ಬಿತ್ತಿದ ಬೆಳೆಗಳೆಲ್ಲ ನೀರಲ್ಲಿ ನಿಂತು ಕೊಳೆತು ಹೋಗಿವೆ. ಇನ್ನುಳಿದ ಬೆಳೆಗಳನ್ನು ಮಾರಾಟ ಮಾಡಲು ಹೋದರೂ ಬೆಲೆ ಇಲ್ಲದಂತಾಗಿದೆ. ಆದ್ದರಿಂದ ಸರ್ಕಾರ ಕೊಟ್ಟ ಮಾತಿನಂತೆ ಹೆಸರು ಕಾಳುಗಳನ್ನು ಖರೀದಿ‌ ಮಾಡಲು ಪ್ರಕ್ರಿಯೆ ಆರಂಭ ಮಾಡಬೇಕಿದೆ.

Edited By : Somashekar
Kshetra Samachara

Kshetra Samachara

27/09/2022 07:58 pm

Cinque Terre

28.69 K

Cinque Terre

0

ಸಂಬಂಧಿತ ಸುದ್ದಿ