ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಪ್ರವಾಹ ನೋಡಲು ಬಂದ ವ್ಯಕ್ತಿ, ಪ್ರವಾಹಕ್ಕೆ ಸಿಲುಕಿ ಅವಾಂತರ

ನವಲಗುಂದ: ಉಕ್ಕಿ ಹರಿಯುತ್ತಿರುವ ಹಳ್ಳ ನೋಡಲು ಬಂದ ವ್ಯಕ್ತಿಯೋರ್ವ ಸೇತುವೆ ಕುಸಿದ ಪರಿಣಾಮ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾನೆ. ಪ್ರವಾಹದ ಮಧ್ಯ ಇದ್ದ ಹುಣಸೆ ಮರ ಏರಿ ಕುಳಿತ್ತಿದ್ದ. ನಂತರ ಅಗ್ನಿ ಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಲಾಗಿದೆ.

ನವಲಗುಂದದಿಂದ ರೋಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಡಿತಗೊಂಡಿದೆ. ತಾಲ್ಲೂಕಿನ ಖನ್ನೂರ ಹಾಗೂ ಶಲವಡಿ ನಡುವೆಯ ಸೇತುವೆಯಲ್ಲಿ ಘಟನೆ ನಡೆದಿದ್ದು, ಪ್ರವಾಹವನ್ನು ನೋಡಲು ಬಂದ ಖನ್ನೂರ ಗ್ರಾಮದ ಚನ್ನಬಸಪ್ಪ ತಿಮ್ಮಣ್ಣವರ ಎಂಬುವವರು ನೋಡ ನೋಡುತ್ತಿದ್ದಂತೆ ಸೇತುವೆ ಕುಸಿದು ನೀರಲ್ಲಿ ಕೊಚ್ಚಿ ಹೋಗಿದ್ದಾನೆ. ನಂತರ ಆತನನ್ನು ರಕ್ಷಣೆ ಮಾಡಲಾಗಿದೆ.

Edited By : Somashekar
Kshetra Samachara

Kshetra Samachara

06/09/2022 12:41 pm

Cinque Terre

40.77 K

Cinque Terre

1

ಸಂಬಂಧಿತ ಸುದ್ದಿ