ಪಬ್ಲಿಕ್ ನೆಕ್ಸ್ಟ್ ವರದಿ- ಈರಣ್ಣ ವಾಲಿಕಾರ
ಹುಬ್ಬಳ್ಳಿ: ಅದು ಸರ್ಕಾರಿ ಅನುದಾನಿತ ಶಾಲೆ, ಮೂರು ಗ್ರಾಮಗಳ ದಲಿತ ಮಕ್ಕಳು ಕಲಿಯುತ್ತಿರುವ ಶಾಲೆ. ಕಳೆದ 30 ವರ್ಷಗಳ ಹಿಂದೆ ಕಟ್ಟಲಾದ ಈ ಶಾಲೆ ಅದೇಷ್ಟೋ ಮಕ್ಕಳಿಗೆ ಬೆಳಕಾಗಿತ್ತು. ಈ ಶಾಲೆಯ ಸದ್ಯದ ಪರಿಸ್ಥಿತಿ ಮಾತ್ರ ಹೇಳತಿರದ್ದಾಗಿದೆ. ಅಷ್ಟಕ್ಕೂ ಆ ಶಾಲೆ ಯಾವುದು ಅಂತಿರಾ ಈ ಸ್ಟೋರಿ ನೋಡಿ....
ಹೌದು. ಹೀಗೆ ಒಂದು ಕಡೆ ಶಾಲೆ ಗೋಡೆಗಳು ಶಿಥಿಲಗೊಂಡಿವೆ. ಕುಡಿಯಲು ನೀರು ಇಲ್ಲದೆ ವಿದ್ಯಾರ್ಥಿಗಳ ಪರದಾಡುತ್ತಿದ್ದಾರೆ. ಮಕ್ಕಳೇ ತಳ್ಳೋ ಗಾಡಿಯಲ್ಲಿ ನೀರನ್ನು ತರುತ್ತಿರುವ ದೃಶ್ಯಗಳು ಕಂಡು ಬಂದಿದ್ದು, ಹುಬ್ಬಳ್ಳಿ ತಾಲ್ಲೂಕಿನ ಕಟ್ನೂರ ಗ್ರಾಮದಲ್ಲಿರುವ ಡಾ. ಅಂಬೇಡ್ಕರ್ ಪ್ರೌಢಶಾಲೆಯಲ್ಲಿ. ಈ ಶಾಲೆಗೆ ಗಿರಿಯಾಲ, ಕಟ್ನೂರು, ಮಾವನೂವ ಗ್ರಾಮಗಳಿಂದ ಸುಮಾರು 140ಕ್ಕೂ ಹೆಚ್ಚು ಮಕ್ಕಳು ಬರುತ್ತಾರೆ. ಆದರೆ ಇಲ್ಲಿ ಕುಡಿಯುವ ನೀರು, ಶೌಚಾಲಯ, ಸ್ವಚ್ಛವಾದ ಕೊಠಡಿಗಳು ಇಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದು, ಶಾಲೆಯ ಪರಿಸ್ಥಿತಿ ಮಾತ್ರ ಮೂಲಭೂತ ಸೌಲಭ್ಯಗಳಿಲ್ಲದೆ ಬಿಕೋ ಎನ್ನುತ್ತಿದೆ. ಸದ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ದಲಿತ ಸಂಘನೆ ಸದಸ್ಯರು ಪ್ರತಿಭಟನೆ ಮಾಡಿದ್ದಾರೆ.
ಬೈಟ್- ವಿಜಯ ಗುಂಟ್ರಾಳ, ದಲಿತ ಮುಖಂಡ
ಇನ್ನು 1991-92ರಲ್ಲಿ ಆರಂಭವಾದ ಈ ಶಾಲೆ ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿದೆ. ಅಷ್ಟೇ ಅಲ್ಲದೆ ಕುಡಿಯುವ ನೀರನ್ನು ಮಕ್ಕಳು ತಳ್ಳೋ ಗಾಡಿಯಲ್ಲಿ ನಿತ್ಯ ಬೇರೆ ಕಡೆಯಿಂದ ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 4 ವರ್ಷಗಳಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ, ಶಾಲೆಯ ಮುಖ್ಯೋಪಾಧ್ಯಾಯರು ಕಟ್ನೂರು ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲವಂತೆ.
ರಾಜ್ಯದಲ್ಲಿ ಅನೇಕ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚಿದ ಉದಾಹರಣೆಗಳಿವೆ. ಕೊನೆ ಪಕ್ಷ ಇಂತಹ ಶಾಲೆಗಳ ಕಡೆ ಅಧಿಕಾರಿಗಳು ಗಮನ ಹರಿಸಿ ಮಕ್ಕಳ ಉಜ್ವಲ ಭವಿಷ್ಯದ ಕುರಿತು ಚಿಂತಿಸಿ ಕ್ರಮ ಕೈಗೋಳ್ಳಬೇಕು ಎನ್ನುವುದು ಪಬ್ಲಿಕ್ ಆಗ್ರಹ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
Kshetra Samachara
18/08/2022 03:12 pm