ಹುಬ್ಬಳ್ಳಿ: ಅವಳಿನಗರವನ್ನು ಸ್ವಚ್ಛನಗರ ಕಾರ್ಯಕ್ರಮದಡಿ ಖಾಲಿ ನಿವೇಶನ ಸ್ವಚ್ಛಗೊಳಿಸಲು ಮುಂದಾಗಿದ್ದ ಪಾಲಿಕೆ ಪರವಾನಗಿ ಪಡೆಯದೆ ಮನೆ, ವಾಣಿಜ್ಯ ಕಟ್ಟಡ ನಿರ್ಮಿಸಿರುವ 550ಕ್ಕೂ ಹೆಚ್ಚಿನ ಪ್ರಕರಣ ಪತ್ತೆ ಮಾಡಿದ್ದು, ಬರೋಬ್ಬರಿ 7ಕೋಟಿ ದಂಡ ವಿಧಿಸಲು ಕ್ರಮ ವಹಿಸಿದೆ. ಈಗಾಗಲೇ ಖಾಲಿ ನಿವೇಶನದ ಅವ್ಯವಸ್ಥೆ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಹಲವು ಬಾರಿ ವರದಿ ಮಾಡಿರುವ ಬೆನ್ನಲ್ಲೇ ಈಗ ಇಂತಹದೊಂದು ಮಹತ್ವದ ಕಾರ್ಯಕ್ಕೆ ಮುಂದಾಗಿದೆ.
ಹೌದು.. ಕಳೆದ ಜೂನ್ ಹಾಗೂ ಜುಲೈ ತಿಂಗಳಲ್ಲಿ ಸಚ್ಚ ಸರ್ವೇಕ್ಷಣದ ಭಾಗವಾಗಿ ಪಾಲಿಕೆ ಮಹಾನಗರದಾದ್ಯಂತ ಖಾಲಿ ನಿವೇಶನಗಳ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿತ್ತು. ಎಲ್ಲ ವಲಯಗಳ ವ್ಯಾಪ್ತಿಯಲ್ಲಿ ಆಯಾ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗಿತ್ತು. ನಿವೇಶನದಲ್ಲಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಡೆದಿದ್ದ ಖಾಲಿ ನಿವೇಶನ ಸ್ವಚ್ಛತಾ ಕಾರ್ಯ ಸ್ವಚ್ಛತೆ ಇಲ್ಲದ, ಗಿಡಗಂಟೆ, ತ್ಯಾಜ್ಯ ತುಂಬಿದ್ದ ನಿವೇಶನವನ್ನು ಪಾಲಿಕೆಯಿಂದಲೇ ಸ್ವಚ್ಛಗೊಳಿಸಲು ಮುಂದಾಗಿತ್ತು. ಇದಕ್ಕೆ ತಗುಲಿದ ವೆಚ್ಚವನ್ನು ನಿವೇಶನದ ಪಿಐಡಿ ಸಂಖ್ಯೆಗೆ ಜೋಡಿಸಿ ಮುಂದಿನ ಹಂತದಲ್ಲಿ 2500-50ಸಾವಿರ ವರೆಗೂ ದಂಡವನ್ನು ಮಾಲೀಕರಿಂದ ಆಕರ ಮಾಡಲಾಗುತ್ತಿದೆ.
ಇನ್ನೂ ಇದು ಒಂದು ಕಡೆಯಾದರೆ, ಇನ್ನೊಂದು ಕಡೆ ಸ್ವಚ್ಛತೆಗೆ ಮುಂದಾದ ಆರಂಭಿಕ ಹಂತದಲ್ಲೇ ಅಧಿಕಾರಿಗಳಿಗೆ ಖಾಲಿ ನಿವೇಶನದಲ್ಲಿ ಪರವಾನಗಿ ಪಡೆಯದೇ ಕಟ್ಟಡ ನಿರ್ಮಾಣ ಆಗಿರುವುದು ಕಂಡು ಬಂದಿತ್ತು. ಪಾಲಿಕೆಯಿಂದ ಸಿಸಿ ಪಡೆಯದೆ ನಿರ್ಮಿಸಲಾದ ಕಟ್ಟಡವನ್ನು ಅಕ್ರಮ ಎಂದೇ ಪರಿಗಣಿಸಲಾಗುತ್ತದೆ. ಅಲ್ಲದೆ, ಮನೆ, ವಾಣಿಜ್ಯಸಂಕೀರ್ಣ, ಶೆಡ್ ನಿರ್ಮಿಸಿದ್ದ ಹಲವರು ಈವರೆಗೂ ಖಾಲಿ ನಿವೇಶನಕ್ಕೆ ನೀಡುತ್ತಿದ್ದ ಕರವನ್ನೇ ವರ್ಷಾನುಗಟ್ಟಲೆ ಪಾವತಿಸಿ ಕೊಂಡು ಬಂದಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಪಾಲಿಕೆಯು ಶೇ. 200ರಷ್ಟು ದಂಡ ವಿಧಿಸಲು ಮುಂದಾಗಿದೆ.
ಮಹಾನಗರದಲ್ಲಿ ಸುಮಾರು 550ಕ್ಕೂ ಹೆಚ್ಚಿನ ಕಟ್ಟಡಗಳನ್ನು ಯಾವುದೆ ಪರವಾನಗಿ ಇಲ್ಲದೆ ನಿರ್ಮಾಣ ಮಾಡಿರುವುದು ಕಂಡುಬಂದಿದೆ. ಪರಿಣಾಮ ಎಲ್ಲ ವಾರ್ಡ್‌ಗಳಲ್ಲಿಯೂ ಈ ರೀತಿ ಅಕ್ರಮ ಕಟ್ಟಡಗಳ ಪರಿಶೀಲನೆಗೆ ಮುಂದಾಗ ಲಾಗಿತ್ತು. ಕಟ್ಟಡದ ಮಾಲೀಕರು ಹೆಸ್ಕಾಂಗೆ ಪಾವತಿ ಸಿದ್ಧ ವಿದ್ಯುತ್ ಬಿಲ್, ನೀರಿನ ಕರೆದ ರಸೀದಿ ಆಧಾರದ ಮೇಲೆ ಕಟ್ಟಡ ಯಾವಾಗ ಕಾರ್ಯಾರಂಭ ಮಾಡಿದೆ ಎಂದು ಪತ್ತೆ ಮಾಡಲಾಗಿದೆ. ಇವುಗಳ ಮಾಲೀಕರಿಗೆ ನಿವೇಶನ, ಕಟ್ಟಡದ ಸ್ವರೂಪ ಆಧರಿಸಿ ಶೇ. 200ರ ವರೆಗೂ ದಂಡ ವಿಧಿಸಲಾಗಿದೆ.
Kshetra Samachara
04/08/2022 11:06 pm