ಕುಂದಗೋಳ : ನಮಸ್ಕಾರ ರೀ ಕುಂದಗೋಳ ಮಹಾಜನತೆ ಏನ್ರೀ ಪಾ, ಕುಂದಗೋಳ ತಾಲೂನ್ಯಾಗ ಎನ್ ರಸ್ತೆ ಹಾಳಾಗ್ಯಾವ್ರೀ ಒಂದೊಂದು ರಸ್ತೆನೂ ಥೇಟ್ ನೀರಿನ ಹೊಂಡ ಆಗ್ಯಾವ್.
ಹೌದು ರೀ ! ಕುಂದಗೋಳ ತಾಲೂಕಿನ ಗುಡಗೇರಿಯಿಂದ ಮಂಡಿಗನಾಳಕ್ಕೆ ಹೋಗೋ ರಸ್ತೆ ತುಂಬಾ ಎಲ್ಲೇ ನೋಡತ್ತಿರಿ ಅಲ್ಲೇ ತಗ್ಗು, ಗುಂಡಿ, ರಾಡಿ, ಅಬಾಬಾ, ಏನ್ ಜನಪ್ರತಿನಿಧಿಗಳು ಏನು ಅಧಿಕಾರಿಗಳು ಛೇ..ಛೇ...
ಇನ್ನಾ ದಿನಾ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರಿಗೆ ಬಸ್, ರೈತಾಪಿ ಜನ, ರೈತಾಪಿ ವಾಹನ ಸೇರಿದಂತೆ ನೂರಾರು ವಾಣಿಜ್ಯ ವಾಹನ ಓಡಾಟ ಮಾಡೋ ರಸ್ತೆ ಇತ್ತೀಚೆಗೆ ರೆಡಿ ಆಗೇತಿ ಅಂತ್ರೀ ಪಾ. ಆದ್ರೂ ಇಷ್ಟ್ ತಗ್ಗು ಗುಂಡಿ ಹೇಂಗ್ ಬಿದ್ದವು ಇದು ಕಳಪೆ ಕಾಮಗಾರಿನಾ ? ಯಾರಿಗೆ ಗೊತ್ತು ಅಂತ್ಹೇಳಿ ಜನಾ ಹೇಳಾಕತ್ತಾರ್.
ಇನ್ನ್ ಈ ಗುಡಗೇರಿ ಮುಖ್ಯ ವೃತ್ತದಿಂದ ರೈಲ್ವೆ ಟ್ರ್ಯಾಕ್ ರಸ್ತೆ ಅವ್ಯವಸ್ಥೆ ನೋಡಂಗಿಲ್ಲಾ ಬಿಡ್ರೀ, ಈ ಡಾಂಬರ್ ರಸ್ತೆ ದೊಡ್ಡ ದೊಡ್ಡ ತಗ್ಗು ಮುಚ್ಚಾಕ್ ಕಲ್ಲು ಸುರದಾರ್ ಆದ್ರ್, ಡಾಂಬರ್ ಹಾಕಿಲ್ಲಾ. ಈ ಬಗ್ಗೆ ಅಲ್ಲಿನ ಜನಾನೆ ಎನ್ ಹೇಳ್ತಾರೆ ಕೇಳ್ರಿ.
ಬೈಟ್.1 ಮಂಜುನಾಥ ಬನ್ನಿ, ಸ್ಥಳೀಯರು
ಬೈಟ್.2 ರವಿರಾಜ್, ಸ್ಥಳೀಯರು
ಆ ಮ್ಯಾಗ್ ನೋಡ್ರಿಲ್ಲೇ ಸ್ವತಃ ನಮ್ಮ ಶಾಸಕರ ಕಾರು ಇದೇ ರಸ್ತೆದಾಗ ತಗ್ಗು ಗುಂಡಿ ತಪ್ಪಿಸಕೋತ್, ತಪ್ಪಿಸಕೋತ್ ಹೇಂಗ್ ಹೊಂಟ್ಹೇತಿ, ಏನ್ರೀ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೇ ಜನ ಮತ್ತು ಜನಪ್ರತಿನಿಧಿಗಳು ಓಡಾಟೋ ರಸ್ತೆ ನಿರ್ಮಾಣಕ ನಿರಾಸಕ್ತಿ ಯಾಕ್ರೀ,? ಮತ್ತ್ ಕಳಪೆ ಕಾಮಗಾರಿ ಆರೋಪ ಬೇರೆ ?
ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ರಸ್ತೆ ಸುವ್ಯವಸ್ಥೆ ಕಾಪಾಡ್ರಿ ಪಾ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
06/07/2022 01:28 pm