ಕಲಘಟಗಿ : ಭೂ ಕಾಯ್ದೆ,ಎಪಿಎಂಸಿ ಕಾಯ್ದೆ,ವಿದ್ಯುತ್ ಕಾಯ್ದೆ ಸೇರಿದಂತೆ ರೈತರಿಗೆ ಮಾರಕವಾದ ಕಾಯ್ದೆ ವಿರೋಧಿಸಿ ಕಬ್ಬು ಬೆಳೆಗಾರ ಸಂಘಟನೆ,ಪಂಪಸೆಟ್ ಬಳಕೆದಾರ ಸಂಘದಿಂದ ರಾಷ್ಟ್ರೀಯ ಹೆದ್ದಾರಿ ಬಂದ್ ಹೆದ್ದಾರಿ ಬಂದ್ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ರಾಜ್ಯ ಜಬ್ಬು ಬೆಳೆಗಾರರ ಸಂಘದ ಜಿಲ್ಲಾ ಅಧ್ಯಕ್ಷ ನಿಜಗುಣಿ ಕೆಲಗೇರಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯಗಳು ರೈತರೊಂದಿಗೆ ಚರ್ಚಿಸದೆ ಜಾರಿಗೆ ತಂದಿರುವ ಭೂ ಕಾಯ್ದೆ,ಎಪಿಎಂಸಿ ಕಾಯ್ದೆ,ವಿದ್ಯುತ್ ಕಾಯ್ದೆಗಳು ರೈತರಿಗೆ ಮರಣ ಶಾಸನಗಳಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಂಪಸೆಟ್ ಬಳಕೆದಾರ ಸಂಘದ ಜಿಲ್ಲಾ ಅಧ್ಯಕ್ಷರಾದ ಉಳವಪ್ಪ ಬಳಗೇರ ಮಾತನಾಡಿ, ಪ್ರಧಾನಿ ಮೋದಿ ವಿದೇಶ ಸುತ್ತುವ ಕಾಯಕದಲ್ಲಿ ಇದ್ದು,ರೈತರ ಹಿತ ಕಾಪಾಡಲು ವಿಫಲರಾಗಿದ್ದಾರೆ ಎಂದರು.ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಂಜುನಾಥ ಮುರಳ್ಳಿ,ಜಿಲ್ಲಾ ಉಪಾಧ್ಯಕ್ಷ ಲಿಂಗರಡ್ಡಿ ನಡುವಿನಮನಿ ಬೆಂಲಿಸಿದರು.ಒಂದು ಗಂಟೆ ಕಾಲ ಹೆದ್ದಾರಿ ತಡೆ ಮಾಡಲಾಯಿತು.ರಾಚಯ್ಯ ಹಾರೂಗೇರಿ, ರಾಚನಗೌಡ ಪಾಟೀಲ,ನಾಗನಗೌಡ ಪಾಟೀಲ,ಉಳವಪ್ಪ ತಡಸ ಇದ್ದರು.
Kshetra Samachara
25/09/2020 07:55 pm